ಮನೆ ಮನೆಗೆ ಕಲ್ಲು ಒಗೆಯುವುದು, ಕತ್ತಿ ತಗೊಂಡು ಹೊಡೆಯೋದು ಸಣ್ಣ ವಿಚಾರಾನ

ಶಿವಮೊಗ್ಗ (ಅ.7): ಮನೆ ಮನೆಗೆ ಕಲ್ಲು ಒಗೆಯುವುದು, ಕತ್ತಿ ತಗೊಂಡು ಹೊಡೆಯೋದು ಸಣ್ಣ ವಿಚಾರವಾ?ಎಂದು ಪೇಜಾವರ ಶ್ರೀ ಪ್ರಶ್ನಿಸಿದ್ದಾರೆ.

ಶಿವಮೊಗ್ಗದ ರಾಗಿಗುಡ್ಡದಲ್ಲಿ ಇತ್ತೀಚೆಗೆ ನಡೆದ ಗಲಭೆಗೆ ಸಂಬಂಧಿಸಿದಂತೆ ಉಡುಪಿಯ ಪೇಜಾವರ ಮಠದ ಪೇಜಾವರ ಶ್ರೀರಾಮ್ ಪ್ರಶ್ನೆ ಮಾಡಿದ್ದಾರೆ.

ಇಲ್ಲಿಯ ಜೆಎಸ್ಸೆಸ್‌ ನೂತನ ಆಡಳಿತ ಮಂಡಳಿ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಗಲಾಟೆ, ಗಲಭೆಗಳನ್ನು ಸರ್ಕಾರದಿಂದ ನಿಯಂತ್ರಿಸುವ ಕೆಲಸವಾಗಬೇಕು.ಗಲಭೆಗಳನ್ನು ಮೂಲದಲ್ಲಿಯೇ ಹತ್ತಿಕ್ಕಬೇಕು. ಯಾರಇಂತಹವುಗಳನ್ನು ಸಣ್ಣ ವಿಚಾರವೆಂದು ತಿಳಿಯಬಾರದು. ಸರ್ಕಾರ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

Latest Indian news

Popular Stories