Featured StoryINTERNATIONAL

ಇಸ್ರೇಲ್ vs ಪ್ಯಾಲೆಸ್ತೈನ್ ಯುದ್ಧ | 198 ಪ್ಯಾಲೆಸ್ತೈನೀಯರು, 100 ಮಂದಿ ಇಸ್ರೇಲಿಗರ ಮೃತ್ಯು

ಅಕ್ಟೋಬರ್ 7 ರ ಶನಿವಾರ ಬೆಳಿಗ್ಗೆ ಗಾಜಾ ಪಟ್ಟಿಯಿಂದ ಇಸ್ರೇಲ್ ಕಡೆಗೆ ಡಜನ್ಗಟ್ಟಲೆ ರಾಕೆಟ್‌ಗಳನ್ನು ಉಡಾಯಿಸಲಾಗಿದೆ. ಇದರಲ್ಲಿ ಕನಿಷ್ಠ 100 ಇಸ್ರೇಲಿಗಳು ಸಾವನ್ನಪ್ಪಿದ್ದಾರೆ ಮತ್ತು 1,000 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್‌ನ ದಾಳಿಯಲ್ಲಿ ಕನಿಷ್ಠ 198 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಮತ್ತು 1,610 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ವೈದ್ಯಕೀಯ ಮೂಲಗಳು ಅಲ್ ಜಜೀರಾಗೆ ತಿಳಿಸಿವೆ.

ದಾಳಿಯ ನಂತರ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ” ದೇಶವು ಯುದ್ಧದಲ್ಲಿದೆ ಮತ್ತು ಹಮಾಸ್ ಅಭೂತಪೂರ್ವ ಬೆಲೆಯನ್ನು ಪಾವತಿಸಲಿದೆ ” ಎಂದು ಘೋಷಿಸಿದರು.

“ಇಸ್ರೇಲ್ ನಾಗರಿಕರೇ, ನಾವು ಯುದ್ಧದಲ್ಲಿದ್ದೇವೆ. ಇದು ಕಾರ್ಯಾಚರಣೆಯಲ್ಲ, ಉಲ್ಬಣವಲ್ಲ – ಇದು ಯುದ್ಧ. ಮತ್ತು ನಾವು ಗೆಲ್ಲುತ್ತೇವೆ. ಹಮಾಸ್ ಅಭೂತಪೂರ್ವ ಬೆಲೆ ತೆರಲಿದೆ ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button