Featured StoryINTERNATIONAL

ಫ್ಯಾಲೆಸ್ತೈನ್’ನ ವಿದ್ಯುತ್ ಸರಬರಾಜು ಸ್ಥಗಿತ – ಇಸ್ರೇಲ್ ಘೋಷಣೆ

ಪ್ಯಾಲೆಸ್ಟೈನ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭಗೊಂಡಿದ್ದು ಹಮಾಸ್ ದಾಳಿಗೆ ಇಸ್ರೇಲಿನ 200 ಕ್ಕೂ ಅಧಿಕ ಮಂದಿ ಪ್ರಾಣ ತೆತ್ತರೆ, ಪ್ರತಿ ದಾಳಿಯಲ್ಲಿ ಗಾಝಾ ಪಟ್ಟಿಯ 230 ಕ್ಕೂ ಅಧಿಲ ಮಂದಿ ಹತರಾಗಿದ್ದಾರೆ.

ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಇಸ್ರೇಲ್’ನ ಜನರನ್ನು ಹಮಾಸ್ ಮಿಲಿಟೆಂಟ್’ಗಳು ಬಂಧಿಸಿದ್ದಾರೆ.‌ಅದರೊಂದಿಗೆ ಹಮಾಸ್ ಹಲವು ಮಿಲಿಟೆಂಟ್’ಗಳನ್ನು ಇಸ್ರೇಲ್ ಸೈನಿಕರು ಬಂಧಿಸಿದ್ದಾರೆ.

ಇದೀಗ ಈ ಬೆಳವಣಿಗೆಯ ನಂತರ ಪ್ಯಾಲೆಸ್ಟೈನ್’ಗೆ ವಿದ್ಯುತ್ ಸರಬರಾಜು ಮಾಡುವ ಸಂಸ್ಥೆಗಳಿಗೆ ಸ್ಥಗಿತಗೊಳಿಸಲು ಆದೇಶ ಹೊರಡಿಸಿದೆ. ಅಲ್’ಜಝೀರಾ ಸುದ್ದಿ ಸಂಸ್ಥೆಯ ಮಾಹಿತಿ ಪ್ರಕಾರ 2008 ರಿಂದ 2023 ರವರೆಗೆ 6000 ಕ್ಕೂ ಅಧಿಕ ಪ್ಯಾಲೆಸ್ಟೈನೀಯರನ್ನು ಇಸ್ರೇಲ್ ಹತ್ಯೆ ಮಾಡಿದ್ದರೆ, ಈ ಸೆಣಸಾಟದಲ್ಲಿ ಇಸ್ರೇಲ್’ನ 300 ಮಂದಿ ಪ್ರಾಣ ತೆತ್ತಿದ್ದಾರೆ.

ಹಮಾಸ್ ಮಿಲಿಟೆಂಟ್ ಗಳು ಅಲ್ ಜಝೀರಾಗೆ ನೀಡಿದ ಸಂದರ್ಶನದಲ್ಲಿ, ಇಸ್ರೇಲ್ ದಶಕಗಳಿಂದ ಪ್ಯಾಲೆಸ್ಟೈನ್ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ದ ಮತ್ತು ಇತ್ತೀಚಿಗಿನ ಅಲ್ ಅಕ್ಸಾ ಮಸೀದಿಯ ದಾಳಿಯ ವಿರುದ್ಧ ಹೋರಾಟ ಎಂದು ಹೇಳಿಕೊಂಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button