
ಶ್ರೀಲಂಕಾ ಎದುರಿನ ಪಂದ್ಯಶ್ರೇಷ್ಠ ಶತಕವನ್ನು “ಗಾಜಾ” ದ ಜನರಿಗೆ ಅರ್ಪಿಸಿದ ಮುಹಮ್ಮದ್ ರಿಝ್ವಾನ್
ಹೈದರಾಬಾದ್: ಒಗ್ಗಟ್ಟಿನ ಸಂಕೇತವಾಗಿ, ಪಾಕಿಸ್ತಾನದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಮುಹಮ್ಮದ್ ರಿಜ್ವಾನ್, ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯಶ್ರೇಷ್ಠ ಶತಕವನ್ನು ಪ್ರಸ್ತುತ ಇಸ್ರೇಲ್ ದಾಳಿಗೆ ಒಳಗಾಗಿರುವ ಗಾಜಾದ ಜನರಿಗೆ ಅರ್ಪಿಸಿದ್ದಾರೆ.
ಪಾಕಿಸ್ತಾನವನ್ನು ಐತಿಹಾಸಿಕ ವಿಜಯದತ್ತ ಕೊಂಡೊಯ್ದ ನಂತರ, ರಿಜ್ವಾನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಗಾಜಾದ ಜನರಿಗೆ ಬೆಂಬಲ ವ್ಯಕ್ತಪಡಿಸಿದರು.
ರಿಜ್ವಾನ್ ತಮ್ಮ X ಖಾತೆಯಲ್ಲಿ (ಹಿಂದೆ ಟ್ವಿಟರ್), “ಇದು ಗಾಜಾದಲ್ಲಿರುವ ನಮ್ಮ ಸಹೋದರ ಸಹೋದರಿಯರಿಗಾಗಿ, ಗೆಲುವಿಗೆ ಕೊಡುಗೆ ನೀಡಲು ಸಂತೋಷವಾಗಿದೆ. ಇಡೀ ತಂಡಕ್ಕೆ ಮತ್ತು ವಿಶೇಷವಾಗಿ ಅಬ್ದುಲ್ಲಾ ಶಫೀಕ್ ಮತ್ತು ಹಸನ್ ಅಲಿಗೆ ಇದನ್ನು ಸುಲಭಗೊಳಿಸಿದ್ದಕ್ಕಾಗಿ ಧನ್ಯವಾದಗಳು. ಅವರಿಗೆ ತುಂಬಾ ಧನ್ಯವಾದಗಳು. ಹೈದರಾಬಾದ್ನ ಜನರ ಅದ್ಭುತವಾದ ಆತಿಥ್ಯ ಮತ್ತು ಬೆಂಬಲಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.
345 ರನ್ಗಳ ಸವಾಲಿನ ಗುರಿಯನ್ನು ಎದುರಿಸಿದ ಪಾಕಿಸ್ತಾನ ಏಕದಿನ ವಿಶ್ವಕಪ್ನ ಇತಿಹಾಸದಲ್ಲಿ ಅತ್ಯಧಿಕ ಚೇಸ್ ಸಾಧಿಸುವಲ್ಲಿ ಯಶಸ್ವಿಯಾಯಿತು. ರಿಜ್ವಾನ್ ಅವರ ಗಮನಾರ್ಹ 131 ರನ್, ಅಬ್ದುಲ್ಲಾ ಶಫೀಕ್ ಅವರ 113 ರನ್ಗಳ ಕೊಡುಗೆಯೊಂದಿಗೆ ಪಾಕಿಸ್ತಾನದ ಐತಿಹಾಸಿಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.




