INTERNATIONAL

ಆಫ್ಘನ್‌ : ಪ್ರಬಲ ಭೂಕಂಪ, ನೂರಾರು ಮನೆಗಳು ನೆಲಸಮ

ಈಗಾಗಲೇ ಸರಣಿ ಭೂಕಂಪ ನಡೆಯುತ್ತಿರುವ ಆಫ್ಘನಿಸ್ತಾನದಲ್ಲಿ ಮತ್ತೊಮ್ಮೆ ಭೂಕಂಪ ಆಗಿದೆ.ಇಂದು ಬೆಳ್ಳಂಬೆಳಗ್ಗೆ 6.1ತೀವ್ರತೆಯ ಪ್ರಬಲ ಭೂಕಂಪ ಉಂಟಾಗಿದ್ದು,ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ಇಂದು ಬೆಳಗ್ಗೆ 06:11ಕ್ಕೆ ಹೆರಾತ್ ರಾಜಧಾನಿಯಿಂದ ಸುಮಾರು 28 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.

ಹೊಸದಾಗಿ ಸಂಭವಿಸಿದ ಭೂಕಂಪನದಿಂದಾಗಿ 465 ಮನೆಗಳು ಸಂಪೂರ್ಣ ನೆಲಸಮವಾಗಿದ್ದು, 135ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಸರಣಿ ಭೂಕಂಪಗಳಿಂದ ದೂರವಾಣಿ, ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದರಿಂದ ರಕ್ಷಣಾ ಕಾರ್ಯದಲ್ಲಿ ಅಡಚಣೆಯುಂಟಾಗಿದೆ. ಸರಣಿ ಭೂಕಂಪಗಳಲ್ಲಿ ಸತ್ತವರ ಸಂಖ್ಯೆ ನಾಲ್ಕು ಸಾವಿರ ಗಡಿ ದಾಟಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button