
Crime
ಶಿಶುವಿಹಾರದ ವಿದ್ಯಾರ್ಥಿನಿಯೊಬ್ಬಳ ಬೆನ್ನಿಗೆ 35 ಬಾರಿ ಬಾರಿಸಿದ ಶಿಕ್ಷಕಿ
ಗುಜರಾತ್: ಸೂರತ್‌ನ ಶಾಲೆಯೊಂದರಿಂದ ಶಿಕ್ಷಕರೊಬ್ಬರು ವಿದ್ಯಾರ್ಥಿನಿಗೆ ಹೊಡೆದಿರೋದು ಬೆಳಕಿಗೆ ಬಂದಿದೆ.ಘಟನೆಯ ವಿಡಿಯೋ ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ಶಿಶುವಿಹಾರದ ವಿದ್ಯಾರ್ಥಿನಿಯೊಬ್ಬಳ ಬೆನ್ನು ಮತ್ತು ಕೆನ್ನೆಗೆ 35 ಬಾರಿ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.
ವೀಡಿಯೊದಲ್ಲಿ, ಶಿಕ್ಷಕಿ ವಿದ್ಯಾರ್ಥಿನಿಯನ್ನು ಯಾವುದೋ ವಿಷಯಕ್ಕೆ ತಳ್ಳುವುದು ಮತ್ತು ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಸೂರತ್‌ನ ಸಾಧನಾ ನಿಕೇತನ ಶಾಲೆಯಲ್ಲಿ ಈ ಘಟನೆ ನಡೆದಿದೆ




