Udupi

ಉಡುಪಿ | ಆಫ್ಲೈನ್ನಲ್ಲಿ 2509ರೂ., ಆನ್ಲೈನ್ ನಲ್ಲಿ 5,70,507ರೂ. ವಿದ್ಯುತ್ ಬಿಲ್!

ಉಡುಪಿಯ ಅಂಗಡಿ ಮಾಲಕರಿಗೆ ಮೆಸ್ಕಾಂನಿಂದ ಬಿಗ್ ಶಾಕ್

ಉಡುಪಿ: ನಗರದ ಅಂಗಡಿಯೊಂದರ ವಿದ್ಯುತ್ ಬಿಲ್ ಆಪ್ ಲೈನ್ ನಲ್ಲಿ 2509ರೂ ಹಾಗೂ ಆನ್ಲೈನ್ ನಲ್ಲಿ 5,70,507ರೂ ನೀಡುವ ಮೂಲಕ ಮೆಸ್ಕಾಂ ಮಾಲಕರಿಗೆ ಶಾಕ್ ನೀಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

IMG 20231012 WA0010 Udupi

ನಗರದ ಸಂಸ್ಕೃತ ಕಾಲೇಜಿನ ಎದುರುಗಡೆ ಇರುವ ಸಾಧನಾ ರೆಡಿಮೇಡ್ ಮಳಿಗೆಯ ವಿದ್ಯುತ್ ಬಿಲ್ಲು 2509ರೂ. ಬಂದಿದ್ದು, ಅ.15ರಂದು ಕೊನೆಯ ದಿನಾಂಕ ನಿಗದಿ ಪಡಿಸಲಾಗಿತ್ತು. ಪ್ರತಿಬಾರಿ ಮೆಸ್ಕಾಂ ಇಲಾಖೆಯ ವಿದ್ಯುತ್ ಬಿಲ್ಲು ನ್ನು ಆನ್ ಲೈನ್ ಮೂಲಕ ಪೇಮೆಂಟ್ ಮಾಡುತ್ತಿದ್ದ ಅಂಗಡಿ ಮಾಲಕರು ಅ.11ರಂದು ಆನ್ಲೈನ್ ಪಾವತಿಗೆ ಮುಂದಾದರು.

ಆದರೆ ಆನ್ ಲೈನ್ ನಲ್ಲಿ ತೋರಿಸುತ್ತಿದ್ದ ವಿದ್ಯುತ್ ಬಿಲ್ ನೋಡಿ ಮಾಲಕರು ದಂಗಾದರು. ಅದರಲ್ಲಿ 2509ರೂ ಬದಲು 5,70,507ರೂ. ವಿದ್ಯುತ್ ಬಿಲ್ ತೋರಿಸುತ್ತಿತ್ತು. ಈ ರೀತಿ ಆನ್ಲೈನ್ ಬಿಲ್ಲು ನಲ್ಲಿರುವ ದೋಷ ಸರಿಪಡಿಸಬೇಕೆಂದು ಮೆಸ್ಕಾಂ ಇಲಾಖೆಯನ್ನು ಅಂಗಡಿಯ ಮಾಲಕರು ಒತ್ತಾಯಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button