ಮಹಿಷಾ ದಸರಾಕ್ಕೆ ಬಿಜೆಪಿ ಎಸ್ಸಿ ಮೋರ್ಚಾ ಬೆಂಬಲ – ಬಿಜೆಪಿಗೆ ಭಾರೀ ಮುಖಭಂಗ!

ಮೈಸೂರು, ಅ.11: ಮೈಸೂರಿನಲ್ಲಿ ಮಹಿಷ ದಸರಾ
ಆಚರಣೆಗೆ ಮೈಸೂರು ನಗರ ಪೊಲೀಸ್ ಆಯುಕ್ತರು
ಅನುಮತಿ ನಿರಾಕರಿಸಿದ ಬೆನ್ನಿಗೇ ಮಹಿಷ ದಸರಾ ಪರವಾಗಿನಾಡಿನಾದ್ಯಂತ ಬೆಂಬಲ ವ್ಯಕ್ತವಾಗಿದೆ.

ಅನಿರೀಕ್ಷಿತ ಬೆಳವಣಿಗೆಯಲ್ಲಿ ಮಹಿಷ ದಸರಾಕ್ಕೆ ಬಿಜೆಪಿಯ ಎಸ್ಪಿ ಮೋರ್ಚಾ ಬುಧವಾರ ಬಹಿರಂಗ ಬೆಂಬಲ ಘೋಷಿಸಿದ್ದು ಬಿಜೆಪಿ ವರಿಷ್ಠರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.

ಇದರ ಬೆನ್ನಿಗೇ “ಬಿಜೆಪಿ ಹೆಸರನ್ನು ಬಳಸಿಕೊಂಡು ಸಂಸದ
ಪ್ರತಾಪ ಸಿಂಹ ಮಹಿಷ ದಸರಾಗೆ ಅಡ್ಡಿ ಪಡಿಸುತ್ತಿದ್ದಾರೆ. ಈ
ವಿಚಾರ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆಯೇ ಆಗಿಲ್ಲ.
ಹಾಗಾಗಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಮಹಿಷ
ದಸರಾಗೆ ಅವಕಾಶ ನೀಡಬೇಕು” ಎಂದು ಬಿಜೆಪಿ ಮುಖಂಡ
ಗಿರಿಧರ್ ಒತ್ತಾಯಿಸಿದ್ದಾರೆ.

“ಮಹಿಷ ದಸರಾ ಆಚರಿಸುವವರನ್ನು ತುಳಿದು ಹಾಕುತ್ತೇವೆ”
ಎಂಬ ಪ್ರತಾಪ ಸಿಂಹ ಇತ್ತೀಚೆಗೆ ನೀಡಿದ ಹೇಳಿಕೆ ತೀವ್ರ ಟೀಕೆ,ವಿವಾದಕ್ಕೆ ಕಾರಣವಾಗಿತ್ತು.ದಲಿತರು ಮಹಿಷ ದಸರಾ ಆಚರಣೆ ಮಾಡುತ್ತಿರುವುದನ್ನು ಸಂಸದ ಪ್ರತಾಪ ಸಿಂಹ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.ಹಾಗಾಗಿಯೇ ಅವರು ಮಹಿಷ ದಸರಾವಿರೋಧಿಸುತ್ತಿರುವುದು. ಈತ ನೂರಕ್ಕೆ ನೂರರಷ್ಟು ದಲಿತ ವಿರೋಧಿ ಎಂದು ಬಿಜೆಪಿ ಎಸ್ಸಿ ಮೋರ್ಚಾ ಪದಾಧಿಕಾರಿಗಳು ಆರೋಪಿಸಿದ್ದಾರೆ.

Screenshot 2023 1012 110220 Featured Story, State News

 

Latest Indian news

Popular Stories