Featured StoryINTERNATIONAL

ಒತ್ತೆಯಾಳಾಗಿರುವ ಮಕ್ಕಳೊಂದಿಗೆ ಹಮಾಸ್ ಮಿಲಿಟೆಂಟ್’ಗಳ ಸಹನುಭೂತಿಯ ವೀಡಿಯೋ ವೈರಲ್

ದಕ್ಷಿಣ ಇಸ್ರೇಲ್: ಇಸ್ರೇಲ್-ಹಮಾಸ್ ನಡುವಿನ ಯುದ್ಧವು ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಹಮಾಸ್  ದಕ್ಷಿಣ ಇಸ್ರೇಲ್‌ನ ಮೇಲೆ ಮಾರಣಾಂತಿಕ ದಾಳಿಯ ಸಮಯದಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡ ಇಸ್ರೇಲಿ ಮಕ್ಕಳ ವಿಡಿಯೋವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅವರೊಂದಿಗೆ ಅತ್ಯುತ್ತಮವಾಗಿ ವರ್ತಿಸಲಾಗುತ್ತಿದೆ.

ಹಮಾಸ್ ಗುಂಪು ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಈ ವೀಡಿಯೊ ಹಂಚಿಕೊಂಡಿದ್ದು, ಕಿಬ್ಬತ್ಜ್ ‘ಹೋಲಿಟ್’ ಕದನದ ಮಧ್ಯೆ ಹಮಾಸ್ ಹೋರಾಟಗಾರರು ಮಕ್ಕಳ ಬಗ್ಗೆ ಸಹಾನುಭೂತಿ ತೋರಿಸುತ್ತಿದ್ದಾರೆ ಎಂದು ಕ್ಯಾಷ್ಪನ್ ನೀಡಲಾಗಿದೆ. ದಕ್ಷಿಣ ಇಸ್ರೇಲ್‌ನಲ್ಲಿರುವ ಕಿಬ್ಬುಟ್ಜ್ ಹೋಲಿಟ್, ಗಾಜಾ ಗಡಿಗೆ ಬಹಳ ಹತ್ತಿರದಲ್ಲಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ವೀಡಿಯೋದಲ್ಲಿ ಕಾಣಸಿಗುವ ಮಕ್ಕಳನ್ನು ಇನ್ನೂ ಗುರುತಿಸಲಾಗಿಲ್ಲ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗುವಾಗ ಅವರ ಹೆತ್ತವರನ್ನು ಕೊಂದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ದಿ ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಇಸ್ರೇಲ್ ರಕ್ಷಣಾ ಪಡೆಗಳು, ಮಕ್ಕಳನ್ನು ಹಮಾಸ್ ಉಗ್ರರು ತಮ್ಮ ಸ್ವಂತ ಮನೆಗಳಲ್ಲಿ ಒತ್ತೆಯಾಳಾಗಿ ಇರಿಸಿದ್ದಾರೆ, ಅವರ ಪೋಷಕರು ಮುಂದಿನ ಕೋಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿವೆ.

https://twitter.com/Jerusalem_Post/status/1712883595189104822?t=qPyszjNuQqWDVRgFnw2e5w&s=19

ಕಿಬ್ಬುಟ್ಜ್ ಹೋಲಿಟ್ ಮೇಲಿನ ದಾಳಿಯ ಸಮಯದಲ್ಲಿ, ಗುಂಡುಗಳಿಂದ ಕೂಡಿದ ಕಟ್ಟಡಗಳು, ಸುಟ್ಟುಹೋದ ವಾಹನಗಳು ಮತ್ತು ಒಡೆದ ಕಿಟಕಿಯ ಗಾಜುಗಳು ಸಮುದಾಯದಲ್ಲಿ ಹರಡಿಕೊಂಡಿರುವುದು ಕಂಡುಬಂದಿತು, ಇದು ಆಕ್ರಮಣದಿಂದ ಉಂಟಾದ ಸಂಕಟಕ್ಕೆ ಸಾಕ್ಷಿಯಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button