Udupi

ಮಹಿಷಾ ದಸರಾ | ಎಸ್ಪಿ ಮತ್ತು ಜಯನ್ ಮಲ್ಪೆ ಹೇಳಿಕೆಗಳೇನು?

ಉಡುಪಿ: ಉಡುಪಿಯಲ್ಲಿ ಮಹಿಷ ದಸರಾಕ್ಕೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ ಪಿ ಡಾ ‌.ಅರುಣ್ ಹೇಳಿಕೆ ನೀಡಿದ್ದು ಮಹಿಷಾ ದಸರಾ ಪರ ವಿರುದ್ಧ ಮೆರವಣಿಗೆ, ಧರಣಿ, ಸತ್ಯಾಗ್ರಹ, ಪೋಸ್ಟರ್ ಹಾಕುವಂತಿಲ್ಲ ಎಂದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊರಾಂಗಣದಲ್ಲಿ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ‌ ಜಿಲ್ಲಾಧಿಕಾರಿಗಳು 35 ಕೆ ಪಿ ಆಕ್ಟ್ ಪ್ರಕಾರ ಆದೇಶ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಹಿಶಾಸುರ ದಸರಾ ಹೊರಾಂಗಣದಲ್ಲಿ ಆಚರಣೆ ನಿರ್ಬಂಧಿಸಲಾಗಿದೆ ಎಂದರು.

ಸೂಕ್ತ ಪೊಲೀಸ್ ಭದ್ರತೆ ಮಾಡಿದ್ದೇವೆ, ಅಗತ್ಯ ಬಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ.ಒಳಾಂಗಣದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಅಗತ್ಯವಿಲ್ಲ. ಒಳಾಂಗಣದಲ್ಲಿ ಕಾಯ್ದೆ ಉಲ್ಲಂಘನೆ ಆದರೆ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಸ್ಪಷ್ಟ ಪಡಿಸಿದರು.

ಜಯನ್ ಮಲ್ಪೆ ಪ್ರತಿಕ್ರಿಯೆ:

ಉಡುಪಿಯಲ್ಲಿ ಮಹಿಷ ದಸರಾಕ್ಕೆ ನಿರ್ಬಂಧ ವಿಚಾರ ಪ್ರತಿಕ್ರಿಯಿಸಿದ ಮಹಿಷ ದಸರಾ ಆಯೋಜಕ ಜಯನ್ ಮಲ್ಪೆ, ಕರಾವಳಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಷಾ ದಸರಾ ಆಯೋಜಿಸಲು ಮುಂದಾಗಿದ್ದೆವು.ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಉದ್ದೇಶ ಇತ್ತು. ಜಿಲ್ಲಾಡಳಿತ ಮೆರವಣಿಗೆ ಮತ್ತು ಬ್ಯಾನರ್ ಅಳವಡಿಕೆಗೆ ನಿರ್ಬಂಧ ಮಾಡಿದೆ. ನಿಷೇದಾಜ್ಞೆ ಮಾಡಿರುವುದರಿಂದ ಧಾರ್ಮಿಕ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದೆ ಎಂದಿದ್ದಾರೆ.

ಮಹಿಷಾಸುರ ಯಾರು ಎಂಬ ವಿಚಾರ ಸಂಕಿರಣ ಆಯೋಜಿಸಿದ್ದೇವೆ. ನಾವು ಕಾನೂನು ನನ್ನ ಕೈಗೆ ಎತ್ತಿಕೊಳ್ಳುವುದಿಲ್ಲ. ಮಹಿಷಾ ದಸರಾ ಬದಲಿಗೆ ಮಹಿಶೋತ್ಸವ ನಡೆಸುತ್ತೇವೆ ಎಂದು ಹೇಳಿದರು.

ರಾಜ್ಯಮಟ್ಟದ ನಾಯಕರ ಸಲಹೆ ಮೇರೆಗೆ ಬದಲಾವಣೆ ಮಾಡಿದ್ದೇವೆ.ದಲಿತ ಸಮುದಾಯದ ಬಂಧುಗಳು ಭಾಗವಹಿಸುತ್ತಾರೆ. ಮಹಿಷ ರಾಕ್ಷಸ ಅಲ್ಲ ರಕ್ಷಕ ಎಂದು ಹೇಳುವುದು ನಮ್ಮ ಉದ್ದೇಶವಾಗಿದೆ ಎಂದರು.ಯಾವುದೇ ಧರ್ಮ ದೇವರ ನಿಂದನೆ ಮಾಡುವುದು ನಮ್ಮ ಉದ್ದೇಶವಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button