
ಕಾರ್ಕಳ: ಡ್ರೋನ್ ಕ್ಯಾಮೆರಾದಲ್ಲಿ ಪರಶುರಾಮ ವಿಗ್ರಹದ ಪಾದ ಕಾಲು ಬಿಟ್ಟು ಉಳಿದ ಭಾಗ ಮಾಯಾ!
ಕಾರ್ಕಳ, ಅ.14: ಬೈಲೂರಿನ ಉಮಿಕಲ್ ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪಿಸಲಾದ ಕಂಚಿನದ್ದೆಂದು ಹೇಳಲಾದ ಪರಶುರಾಮನ ವಿಗ್ರಹ ನಿನ್ನೆ ಇದ್ದಕ್ಕಿದ್ದಂತೆ ಮಾಯವಾಗಿದ್ದು ಮೂರ್ತಿಯ ಸುತ್ತ ಈಗ ದಪ್ಪದ ಕಪ್ಪು ಪ್ಲಾಸ್ಟಿಕ್ ಹೊದಿಕೆ ಹೊದಿಸಲಾಗಿದ್ದು ದೊಡ್ಡ ವಿವಾದ ಸೃಷ್ಟಿಯಾಗಿದೆ.
ಇದರಿಂದ ಯಾರಿಗೂ ಮೂರ್ತಿಯ ಇರುವು ಗೊತ್ತಾಗುತ್ತಿಲ್ಲ. ಅಲ್ಲದೇ ನಿಷೇಧವಿರುವುದರಿಂದ ಬೆಟ್ಟವನ್ನು ಪ್ರವೇಶಿಸಲು ಯಾರಿಗೂ ಅವಕಾಶವನ್ನೂ ನೀಡಲಾಗುತ್ತಿಲ್ಲ. ಈ ನಡುವೆ ಇಂದು ಡೋನ್ ಕ್ಯಾಮರಾವನ್ನು ಬಳಸಿ ಹೊದಿಕೆಯೊಳಗೇನಿದೆ ಎಂಬುದನ್ನು ಪರಿಶೀಲಿಸಲಾಗಿದ್ದು, ಇದರಲ್ಲಿ
ನಕಲಿ ಮೂರ್ತಿಯ ಅಸಲಿ ಮುಖ ಬಯಲಾಗಿದೆ ಎಂದು
ಹೋರಾಟಗಾರರು ತಿಳಿಸಿದ್ದಾರೆ. ಹಿಂದಿದ್ದ ಪರಶುರಾಮನ
ಮೂರ್ತಿಯ ಪಾದ, ಕಾಲು ಬಿಟ್ಟು ಉಳಿದ ಭಾಗ
ಮಾಯವಾಗಿರುವುದು ಡೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಉಮಿಕಲ್ಲು ಬೆಟ್ಟದಲ್ಲಿ ಪ್ರತಿಷ್ಠಾಪಿಸಲಾಗಿದ್ದ 33 ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆ ಇದೀಗ ಮಾಯವಾಗಿರುವುದು ಡೋನ್ ಕ್ಯಾಮರ ಮೂಲಕ ಬಹಿರಂಗವಾಗಿದೆ.
ಇದರೊಂದಿಗೆ ವಿಗ್ರಹ ಸಂಪೂರ್ಣ ನಕಲಿ ಎಂಬುದು ನೂರಕ್ಕೆ ನೂರರಷ್ಟು ಸತ್ಯ ಎಂದು ಜನರಿಗೆ ಮನವರಿಕೆ ಯಾಗಿದೆ ಎಂದವರು ಹೇಳುತಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು: ಈ ನಡುವೆ ಪೊಲೀಸರ ಬಿಗಿ ಬಂದೊಬಸ್ತ್ ನಡುವೇ ಪರಶುರಾಮ ಮೂರ್ತಿ ಮಾಯವಾಗಿದೆ. ಇದನ್ನು ಹುಡುಕಿಕೊಡುವಂತೆ, ಈ ಹಿಂದೆ ಪ್ರತಿಭಟನೆ ನಡೆಸಿದ್ದ ಸಮಾನಮನಸ್ಕ ಹೋರಾಟಗಾರರ ತಂಡದ ದಿವ್ಯಾನಾಯಕ್ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಕಾಂಗ್ರೆಸ್ ಈ ಪ್ರಕರಣದ ಕುರಿತು ಅಕ್ಟೋಬರ್ 16 ರಂದು ಪ್ರತಿಭಟನೆ ನಡೆಸಲಿದೆ.




