
Mumbai
ಮಹಾರಾಷ್ಟ್ರ: ಚಲಿಸುತ್ತಿದ್ದ ರೈಲಿನ 5 ಬೋಗಿಗಳಲ್ಲಿ ಬೆಂಕಿ, ಪ್ರಯಾಣಿಕರು ಅಪಾಯದಿಂದ ಪಾರು
ಮಹಾರಾಷ್ಟ್ರ : ಮಹಾರಾಷ್ಟ್ರದ ಅಹ್ಮದ್ ನಗರದಿಂದ ಅಷ್ಠಿಗೆ ಚಲಿಸುತ್ತಿದ್ದ ರೈಲಿನ ಐದು ಬೋಗಿಗಳಲ್ಲಿ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಅನಾಹುತ ಉಂಟಾಗಿದೆ. ರೈಲಿನ ಬೋಗಿಗಳು ದಗ ದಗ ಉರಿಯಲಾರಂಭಿಸಿದ ಪರಿಣಾಮ ಪ್ರಯಾಣಿಕರು ಭಯಪಟ್ಟಿದ್ದರು.
ಆದರೆ ಅದೃಷ್ಟವಾಶತ್ ಬೆಂಕಿ ಹರಡುವ ಮೊದಲು ಎಲ್ಲಾ ಪ್ರಯಾಣಿಕರನ್ನ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಮತ್ತು ಯಾವುದೇ ಗಾಯಗಳು ಅಥವಾ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ ಎನ್ನಲಾಗಿದೆ.




