Crime

ಇಸ್ರೇಲ್ ವಸಾಹತುಶಾಹಿ ಧೋರಣೆ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ – ವಶಕ್ಕೆ ಪಡೆದ ದೆಹಲಿ ಪೊಲೀಸರು

ಇಸ್ರೇಲ್ ಇದೀಗ ಪ್ರತಿಕಾರದ ಹೆಸರಿನಲ್ಲಿ ಗಾಝಾಪಟ್ಟಿಯಲ್ಲಿ ಹತ್ಯಾಕಾಂಡ ನಡೆಸುತ್ತಿದ್ದು ಅಮಾಯಕ ನಾಗರಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ.

ಇಸ್ರೇಲ್ ಅಕ್ರಮಕ್ಕೆ ವಿಶ್ವದಾದ್ಯಂತ ಪ್ರತಿಭಟನೆ ಮುಗಿಲು ಮುಟ್ಟಿದೆ. ಇದೀಗ ಪ್ಯಾಲೆಸ್ಟೈನ್ ಹತ್ಯಾಕಾಂಡ ವಿರೋಧಿಸಿ ಪ್ಯಾಲೆಸ್ಟೈನ್ ಪರ ದೆಹಲಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು ಈ ಸಂದರ್ಭದಲ್ಲಿ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

“ಪ್ಯಾಲೆಸ್ತೀನ್‌ನಲ್ಲಿ ನೆಲೆಸಿದ ಇಸ್ರೇಲ್‌ನ ವರ್ಣಭೇದ ವಸಾಹತುಶಾಹಿ ವಿರುದ್ಧ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಕ್ರೂರವಾಗಿ ಬಂಧಿಸಿದ್ದಾರೆ” ಎಂದು AISA ಸಂಘಟನೆ ಟ್ವೀಟ್ ಮಾಡಿದೆ.

ಇಸ್ರೇಲ್‌ನ ಕೈಯಲ್ಲಿ ಕ್ರೌರ್ಯವನ್ನು ಎದುರಿಸುತ್ತಿರುವ ಪ್ಯಾಲೆಸ್ಟೈನ್ ಜನರೊಂದಿಗೆ ಜನರು ಏಕೆ ಒಗ್ಗಟ್ಟಿನಿಂದ ಹೊರಬರಲು ಸಾಧ್ಯವಿಲ್ಲ? ಎಂದು ಟ್ವೀಟ್ ನಲ್ಲಿ ಪ್ರಶ್ನಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button