Hassan

HRS ವತಿಯಿಂದ ತರಬೇತಿ ಶಿಬಿರ

ಹಾಸನ: ಹೂಮ್ಯಾನಿಟೇರಿಯನ್ ರಿಲೀಪ್ ಸೊಸೈಟಿ ಇದರ ವತಿಯಿಂದ ಅಕ್ಟೋಬರ್ 12 ರಿಂದ 15 ರ ವರೆಗೆ ನಾಲ್ಕು ದಿವಸಗಳ 3ನೇ ಹಂತದ ತರಬೇತಿ ಶಿಬಿರವನ್ನು ಅರೆಹಳ್ಳಿಯಲ್ಲಿ ಆಯೋಜಿಸಲಾಯಿತು.

ಈಗಾಗಲೇ ದ್ವಿತೀಯ ಹಂತದ ತರಬೇತಿಯನ್ನು ಹೊಂದಿದ್ದ ಬೆಂಗಳೂರು, ಮೈಸೂರು ಮತ್ತು ಹಾಸನ ಝೋನ್‌ನ ಸುಮಾರು 28 ಸ್ವಯಂಸೇವಕರು ಶಿಬಿರದಲ್ಲಿ ಭಾಗವಹಿಸಿದ್ದರು.

ಶಿಬಿರದಲ್ಲಿ ನಾಟ್ಸ್, ಬ್ಯಾಂಡೇಜ್, ಕ್ಯಾಸ್ವಾಲಿಟಿ ಕ್ಯಾರಿಂಗ್, ಫೈರ್ ಫೈಟ್, ರಿವರ್ ಕ್ರಾಸಿಂಗ್, ರಾಕ್ ಕ್ಲೈಂಬಿಂಗ್ ಮುಂತಾದ ತರಬೇತಿಗಳನ್ನು ಪ್ರಾಯೋಗಿಕವಾಗಿ ನೀಡಲಾಯಿತು.

ಕ್ಯಾಪ್ಟನ್ ಅಮೀರ್ ಸಿದ್ದೀಕಿ, ಅಸಿಸ್ಟೆಂಟ್ ಕ್ಯಾಪ್ಟನ್ ಅಬ್ರಾರ್ ಅಹ್ಮದ್‌ರವರ ನೇತ್ರತ್ವದಲ್ಲಿ ತರಬೇತಿ ನೀಡಲಾಯಿತು. ಟ್ರೈನರ್, ರಫೀಯುದ್ದೀನ್, ಮುನವ್ವರ್, ಮುನೀರ್, ಅಮೀರ್ ಜಾನ್, ತೌಫೀಕ್ ತರಬೇತಿಯಲ್ಲಿ ಸಹಕರಿಸಿದರು.

ಹೆಚ್.ಆರ್.ಎಸ್. ನಿರ್ದೇಶಕರಾದ ಕೆ.ಎಮ್.ಅಶ್ರಫ್ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಜೊತೆ ಕಾರ್ಯದರ್ಶಿ ಹೈದರ್ ಅಲಿ, ಸಂದರ್ಭೋಚಿತವಾಗಿ ಮಾತನಾಡಿದರು. ಜ.ಇ.ಹಿಂದ್ ಅರೆಹಳ್ಳಿ ಸ್ಥಾನೀಯ ಅಧ್ಯಕ್ಷರಾದ ಅಬ್ದುಲ್ಲಾ ಉಮರಿ ಸಮಾರೋಪ ನುಡಿಗಳೊಂದಿಗೆ ಶಿಬಿರವು ಸಮಾಪ್ತಿಗೊಂಡಿತು.
.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button