
Featured StorySports
ವಿಶ್ವಕಪ್ ಕ್ರಿಕೆಟ್: ಬೆಂಗಳೂರಿನಲ್ಲಿ ಪಾಕ್-ಆಸೀಸ್ ಪಂದ್ಯ – ಹೈ ಅಲರ್ಟ್
2023 ರ ವಿಶ್ವಕಪ್ ನಲ್ಲಿ (ICC World Cup 2023) ಭಾರತದ ವಿರುದ್ಧ ಹೀನಾಯ ಸೋಲನುಭವಿಸಿದ್ದ ಪಾಕಿಸ್ತಾನ, ಇದೀಗ ತನ್ನ ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ (Australia vs Pakistan) ಕಣಕ್ಕಿಳಿಯುತ್ತಿದೆ. ಉಭಯ ತಂಡಗಳ ಈಕದನ ಅಕ್ಟೋಬರ್ 20 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M. Chinnaswamy Stadium) ನಡೆಯುತ್ತಿದೆ.
ಈ ಬಾರಿಯ ವಿಶ್ವಕಪ್ನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿದೆ. ಹೀಗಾಗಿ ಪಂದ್ಯಕ್ಕೆ ಸಕಲ ಸಿದ್ದತೆಗಳನ್ನು ಕೆಎಸ್ಸಿಎ ಮಾಡಿಕೊಂಡಿದೆ. ಇತ್ತ ಪಂದ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಹಿಸಿರುವ ಬೆಂಗಳೂರು ಪೊಲೀಸರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಹೈಅಲರ್ಟ್ ಘೋಷಿಸಿದ್ದಾರೆ.




