
Uttara Kannada
ಅ. 31ರೊಳಗೆ ಎಲ್ಲಾ ಬಸ್ ಗಳಲ್ಲಿ ‘CCTV’ ಅಳವಡಿಕೆ ಕಡ್ಡಾಯ : ಸಾರಿಗೆ ಸಚಿವ
ತಿರುವನಂತಪುರಂ: ಅಕ್ಟೋಬರ್ 31 ರೊಳಗೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಸೇರಿದಂತೆ ಎಲ್ಲಾ ಸಾರಿಗೆ ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇರಳ ಸಾರಿಗೆ ಸಚಿವ ಆಂಟನಿ ರಾಜು ಗುರುವಾರ ಹೇಳಿದ್ದಾರೆ.
ಗುಣಮಟ್ಟದ ಕ್ಯಾಮೆರಾಗಳು ಲಭ್ಯವಿಲ್ಲದ ಕಾರಣ ಕ್ಯಾಮೆರಾಗಳನ್ನು ಸ್ಥಾಪಿಸುವಲ್ಲಿ ಸ್ವಲ್ಪ ವಿಳಂಬವಾಗಿದೆ ಎಂದು ಸಚಿವರು ಹೇಳಿದರು.ಬಸ್ ನ ಒಳಗೆ ಮತ್ತು ಹಿಂಭಾಗದಲ್ಲಿ ಕ್ಯಾಮೆರಾಗಳನ್ನು ಕಡ್ಡಾಯಗೊಳಿಸಲಾಗುವುದು ಎಂದು ರಾಜು ಹೇಳಿದರು. ಖಾಸಗಿ ಬಸ್ ಗಳ ವಿರುದ್ಧ ವ್ಯಾಪಕ ದೂರುಗಳು ಇರುವ ಕೊಚ್ಚಿಯಲ್ಲಿ ಮೊದಲ ಸುತ್ತಿನ ತಪಾಸಣೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.




