INTERNATIONALFeatured Story

ಇಸ್ರೇಲ್’ನಿಂದ ಚರ್ಚ್ ಮೇಲೆ ದಾಳಿ – ಹಲವಾರು ಮಂದಿ ಮೃತ್ಯು

ಸೆಂಟ್ರಲ್ ಗಾಜಾ ನಗರದಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಗ್ರೀಕ್ ಆರ್ಥೊಡಾಕ್ಸ್ ಸೇಂಟ್ ಪೋರ್ಫಿರಿಯಸ್ ಚರ್ಚ್ ಕಾಂಪೌಂಡ್‌ಗೆ ಹಾನಿಯಾಗಿದೆ.

ಹಮಾಸ್ ನಿಯಂತ್ರಿತ ಆಂತರಿಕ ಸಚಿವಾಲಯವು ಗಾಜಾ ಪಟ್ಟಿಯಲ್ಲಿರುವ ಚರ್ಚ್ ಕಾಂಪೌಂಡ್‌ನಲ್ಲಿ ಆಶ್ರಯ ಪಡೆದಿದ್ದ ಹಲವಾರು ಸ್ಥಳಾಂತರಗೊಂಡ ಜನರು ಗುರುವಾರ ತಡರಾತ್ರಿ ಇಸ್ರೇಲಿ ದಾಳಿಯ ನಂತರ ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಹೇಳಿದರು.

ದಾಳಿಯಿಂದಾಗಿ ಗ್ರೀಕ್ ಆರ್ಥೊಡಾಕ್ಸ್ ಚರ್ಚ್‌ನ ಕಾಂಪೌಂಡ್‌ನಲ್ಲಿ “ದೊಡ್ಡ ಸಂಖ್ಯೆಯಲ್ಲಿ ಜನ ಹುತಾತ್ಮರಾಗಿದ್ದಾರೆ ಮತ್ತು ಗಾಯಗೊಂಡಿದ್ದಾರೆ” ಎಂದು ಎಂದು ಸಚಿವಾಲಯ ತಿಳಿಸಿದೆ.

ಯುದ್ಧದಲ್ಲಿ ಗಾಯಗೊಂಡವರು ಆಶ್ರಯ ಪಡೆಯುತ್ತಿದ್ದ ಚರ್ಚ್ ಶಿಬಿರದ ಮೇಲೆ ಇಸ್ರೇಲ್ ತನ್ನ ಅಮಾನವೀಯ ದಾಳಿ ಮುಂದುವರಿಸಿದೆ. ಕನಿಷ್ಠ ಎಂಟು ಮಂದಿ ಹತರಾಗಿರುವ ವರದಿಯಿದ್ದು ಸಾವಿನ‌ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button