
ಪ್ರಥಮ ರ಼್ಯಾಂಕ್, 8 ಚಿನ್ನದ ಪದಕ ಮತ್ತು 3 ನಗದು ಬಹುಮಾನ ಪಡೆದ ಬುಳ್ಳಾಪುರ ಗ್ರಾಮದ ಮಹೇಶ್ವರಿ ಕೆ.
ರಾಯಚೂರು.ಅ.19 ರಾಯಚೂರು ತಾಲೂಕಿನ ಬುಳ್ಳಾಪುರ ಗ್ರಾಮದ ಮಹೇಶ್ವರಿ ತಂದೆ ಪ್ರಾಣೇಶ ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯಲ್ಲಿ ಎಮ್ ಎಸ್ ಸಿ ಸಸ್ಯ ಶಾಸ್ತ್ರ ವಿಭಾಗದಲ್ಲಿ ಪ್ರಥಮ ರ್ಯಾಂಕ್ 8 ಚಿನ್ನದ ಪದಕ ಮತ್ತು 3 ನಗದು ಬಹುಮಾನ ಪಡೆದಿದ್ದಾಳೆ.
ರಾಯಚೂರು ಜಿಲ್ಲೆಯ ಬುಳ್ಳಾಪುರ ಗ್ರಾಮದ ಮಹೇಶ್ವರಿ ಕೆ ಅವರು, ಬುಳ್ಳಾಪುರ ಗ್ರಾಮದಲ್ಲಿ, 1 ರಿಂದ 5 ನೇ ತರಗತಿಯವರೆಗೆ, ಕೆ.ಆರ್.ಸಿ.ಆರ್. ರೆಸಿಡೆನ್ಸಿಯ ಪಂಚಮುಖಿ ಗಾಣದಾಳದಲ್ಲಿ 6 ರಿಂದ 10 ರವರೆಗೆ, ರಾಯಚೂರಿನ ಎಸ್.ಆರ್.ಪಿ.ಎಸ್. ಕಾಲೇಜಿನಲ್ಲಿ ಪಿಯುಸಿ, ಎಲ್. ವಿ.ಡಿ ಪದವಿ ಕಾಲೇಜಿನಲ್ಲಿ ಡಿಗ್ರಿ, ಹಾಗೂ ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯಲ್ಲಿ ಪಿಜಿ ಎಮ್.ಎಸ್.ಸಿ, ಸಸ್ಯಶಾಸ್ತ್ರ ಮುಗಿಸಿ, ಪ್ರಸ್ತುತ ಐಎಎಸ್ ಕನಸು ಸಾಧಿಸಲು ಯುಪಿಎಸ್ ಸಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾಳೆ.
ಈ ಕುರಿತು ಮಾದ್ಯಮದ ಜೊತೆ ಮಾತನಾಡಿದ ಮಹೇಶ್ವರಿ ಅವರು, ನನ್ನ ಜೀವನದಲ್ಲಿ ಪ್ರಾಥಮಿಕ ಶಾಲೆಯಿಂದ ಪಿಜಿ ವರೆಗೆ ನನ್ನ ಸಾಧನೆಗೆ ಕಾರಣರಾದ ಎಲ್ಲಾ ಶಿಕ್ಷಕರಿಗೆ ಅದರಲ್ಲಿ ವಿಶೇಷವಾಗಿ ಹಾಸ್ಟೆಲ್ ವಾರ್ಡನ್ ಮಂಜುಳಾ ಮೇಡಂ ಅವರಿಂದ ನಾನು ಬಹಳಷ್ಟು ಸ್ಪೂರ್ತಿ ಪಡೆದಿದ್ದೇನೆ. ಅವರು ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ನನ್ನನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅವರಿಂದ ಬಹಳಷ್ಟು ಕಲಿತಿದ್ದೇನೆ. ಅಂತಿಮವಾಗಿ ನಮ್ಮ ಮೂಲಭೂತ ಸೌಕರ್ಯಗಳನ್ನು ಪಡೆಯಲು ನಮ್ಮೊಂದಿಗೆ ಹೋರಾಡಿದ ಪ್ರತಿಯೊಬ್ಬ ನನ್ನ ವಾಲ್ಮೀಕಿ ಸಮುದಾಯದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಹಾಗೂ ಹಾಸ್ಟೆಲ್ ನಲ್ಲಿರುವ ನನ್ನ ಸ್ನೇಹಿತರಿಗೆ ಅಡುಗೆ ಸಿಬ್ಬಂದಿಗಳಿಗೆ ನನ್ನ ತಂದೆ ತಾಯಿವರಿಗೆ ಧನ್ಯವಾದಗಳನ್ನು ತಿಳಿಸಿದರು.
ರಾಯಚೂರು ಗ್ರಾಮೀಣ ಪ್ರದೇಶದ ಬುಳ್ಳಾಪುರು ಎಂಬ ಕುಗ್ರಾಮದಲ್ಲಿ ಹುಟ್ಟಿ ಇಂದು ಮೈಸೂರು ವಿ ವಿ ಯಲ್ಲಿ 8 ಚಿನ್ನದ ಪದಕ ಪಡೆದ ಮಹೇಶ್ವರಿ ಅವರಿಗೆ ವೈಯಕ್ತಿಕವಾಗಿ ಮತ್ತು ವಾಲ್ಮೀಕಿ ಸಮಾಜದಿಂದ ಎನ್.ರಘುವೀರ ನಾಯಕ ಮತ್ತು ಮಲ್ಲಿಕಾರ್ಜುನ ನಾಯಕರವರು ಅಭಿನಂದಿಸಿದ್ದಾರೆ. ವಿದ್ಯೆ ಕಲಿಸಿದ ಗುರುಗಳು, ಗ್ರಾಮದವರು, ವಿದ್ಯಾರ್ಥಿ ನಿಲಯದ ವಾರ್ಡನ್ ಮತ್ತು ಸಿಬ್ಬಂದಿಗಳಿಗೆ ಮತ್ತು ತಂದೆ ತಾಯಿಗೆ ಮತ್ತು ವಾಲ್ಮೀಕಿ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಣದಲ್ಲಿ ಅಮೋಘ ಸಾಧನೆ ಮಾಡಿದ ಮಹೇಶ್ವರಿಗೆ ಮುಂದೆ ಉಜ್ವಲ ಭವಿಷ್ಯವಿದೆ ಎಂದು ರಘುವೀರ ನಾಯಕರವರು ಶುಭ ಹಾರೈಸಿದ್ದಾರೆ.
ಸಾಧನೆಗಳು:- ಕಲ್ಬುರ್ಗಿ ವಿಶ್ವವಿದ್ಯಾಲಯದ ಪದವಿಯಲ್ಲಿ 3 ನೇ ರ್ಯಾಂಕ್ ಪಡೆದಿದ್ದಾಳೆ, ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿ ಕಾಲೇಜಿನ ಎಮ್.ಎಸ್.ಸಿ.ಸಸ್ಯ ಶಾಸ್ತ್ರ ವಿಭಾಗದಲ್ಲಿ ಪ್ರಥಮ ರ್ಯಾಂಕ್,8 ಚಿನ್ನದ ಪದಕ ಮತ್ತು 3 ನಗದು ಬಹುಮಾನ ಪಡೆದಿದ್ದಾಳೆ.




