Bengaluru UrbanFeatured Story

ಹುಲಿ ಉಗುರು ಪ್ರಕರಣ: ಕಾನೂನು ಎಲ್ಲರಿಗೂ ಒಂದೇ: ಈಶ್ವರ್ ಖಂಡ್ರೆ

ಬೆಂಗಳೂರು ಅಕ್ಟೋಬರ್ 25: ರಾಜ್ಯದಲ್ಲಿ ಹುಲಿ ಉಗುರು, ಚರ್ಮ ಧರಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಚರ್ಚೆಗಳು, ಆಗ್ರಹಗಳು ಕೇಳಿ ಬಂದಿವೆ. ರಾಜಕಾರಣಿಗಳು ಸೇರಿದಂತೆ ಸ್ಯಾಂಡಲ್‌ವುಡ್ ನಟರು ಹುಲಿ ಉಗುರು ಧರಿಸಿದ್ದಾರೆ ಮಾತು ಕೇಳಿ ಬರುತ್ತಿದೆ.

ಕನ್ನಡ ಬಿಗ್‌ ಬಾಸ್‌-10 ಮನೆಯಿಂದ ಹಳ್ಳಕಾರ್ ವರ್ತೂರು ಸಂತೋಷ್‌ಅವರನ್ನು ಕರೆತಂದು ‘ಹುಲಿ ಉಗುರು’ ಧರಿಸಿದ್ದಾರೆಂದು ಬಂಧಿಸಲಾಯಿತು.

ವನ್ಯ ಜೀವಿ ಚರ್ಮ, ಉಗುರು ಇನ್ನಿತರ ದೇಹದ ಭಾಗಗಳ ಬಳಕೆ, ಸಾಗಾಣೆ, ಸಂಗ್ರಹಿಸಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ನೆಲದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿದೆ. ಹುಲಿ ಉಗುರು ಬಗ್ಗೆ ನೈಜತೆ ಲಭ್ಯವಾದಲ್ಲಿ ಇಲಾಖೆ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹುಲಿ ಉಗುರಿನ ಧರಿಸಿದ ವಿಚಾರದಲ್ಲಿ ನಟ ಜಗ್ಗೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಕೇಳಿ ಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ವೈಯಕ್ತಿಕವಾಗಿ ಯಾರು ಹೆಸರು ಪ್ರಸ್ತಾಪಿಸುವುದಿಲ್ಲ. ಇಲ್ಲಿ ಕಾನೂನು ಎಲ್ಲರಿಗೂ ಒಂದೇ ಎಂದು ಪರೋಕ್ಷವಾಗಿ ನಟ ಬಿಜೆಪಿ ನಾಯಕ ಜಗ್ಗೇಶ್ ಮತ್ತು ನಟ ದರ್ಶನ್ ಅವರಿಗೂ ಇದು ಅನ್ವಹಿಸುತ್ತದೆ ಎಂದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button