INTERNATIONAL

ಚೀನಾ: ಮಾಜಿ ಪ್ರಧಾನಿ ಲಿ ಕೆಕಿಯಾಂಗ್​ ಹೃದಯಾಘಾತದಿಂದ ನಿಧನ

ಬೀಜಿಂಗ್( ಚೀನಾ): ಒಂದು ದಶಕದಿಂದ ಚೀನಾದ ಉನ್ನತ ಆರ್ಥಿಕ ಅಧಿಕಾರಿಯಾಗಿದ್ದ ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್​ ಹೃದಯಾಘಾತದಿಂದ ನಿಧನರಾಗಿದ್ದಾರೆ.

68 ವರ್ಷದ ಅವರು ಗುರುವಾರ ರಾತ್ರಿ ಹೃದಯಾಘಾತಕ್ಕೊಳಗಾದ ಅವರು ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು.2013 ರಿಂದ 10 ವರ್ಷಗಳ ಕಾಲ ಚೀನಾದ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಲಿ ಕೆಕಿಯಾಂಗ್​, ಈ ವರ್ಷದ ಮಾರ್ಚ್​ನಲ್ಲಿ ಲಿ ಕೆಕಿಯಾಂಗ್​ ಕಾರ್ಯಭಾರದಿಂದ ಕೆಳಗಿಳಿದಿದ್ದರು.

2013 ರಿಂದ 23ರವೆರೆಗೆ ಚೀನಾದ ನಂ.2ನೇ ನಾಯಕರಾಗಿದ್ದರು. ಜೊತೆಗೆ ಖಾಸಗಿ ಸಂಸ್ಥೆಗೆ ವಕೀಲನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಚೀನಾದ ಮಾಜಿ ಪ್ರೀಮಿಯರ್ ಲಿ ಕೆಕಿಯಾಂಗ್ ಅವರು ಇಂಗ್ಲಿಷ್ ಮಾತನಾಡುವ ಅರ್ಥಶಾಸ್ತ್ರಜ್ಞರಾಗಿದ್ದರು.ಹೆನಾನ್​ ಪ್ರಾಂತ್ಯದ ಗವರ್ನರ್​ ಆಗಿದ್ದ ಅವಧಿಯಲ್ಲಿ ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಅವರ ಸುಧಾರಣೆಗಳು ಅವರಿಗೆ ಇನ್ನಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿತು. ಪಕ್ಷದ ನಾಯಕನ ಮಗನಾಗಿ ಹುಟ್ಟಿದರೂ, ಅ ಪ್ರಭಾವವನ್ನು ಬಳಸಿಕೊಂಡು ಪಕ್ಷದಲ್ಲಿ ಮುಂದುವರಿಯಲು ಕೆಕಿಯಾಂಗ್​ ಸಿದ್ಧರಿರಲಿಲ್ಲ.

ಕಾನೂನು ಪದವಿ ಹಾಗೂ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್​ ಪಡೆದಿರುವ ಲಿ ಕೆಕಿಯಾಂಗ್​ ಅವರು ಮಾವೋ ಝೆಡಾಂಗ್​ ಚಿಂತನೆಯ ಅಧ್ಯಯನದಲ್ಲಿ ಪೀಕಿಂಗ್​ ವಿಶ್ವವಿದ್ಯಾಲಯದಲ್ಲಿ ಉತ್ತಮ ಸಾಧನೆ ಮಾಡಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button