
ಚೀನಾ: ಮಾಜಿ ಪ್ರಧಾನಿ ಲಿ ಕೆಕಿಯಾಂಗ್ ಹೃದಯಾಘಾತದಿಂದ ನಿಧನ
ಬೀಜಿಂಗ್( ಚೀನಾ): ಒಂದು ದಶಕದಿಂದ ಚೀನಾದ ಉನ್ನತ ಆರ್ಥಿಕ ಅಧಿಕಾರಿಯಾಗಿದ್ದ ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
68 ವರ್ಷದ ಅವರು ಗುರುವಾರ ರಾತ್ರಿ ಹೃದಯಾಘಾತಕ್ಕೊಳಗಾದ ಅವರು ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು.2013 ರಿಂದ 10 ವರ್ಷಗಳ ಕಾಲ ಚೀನಾದ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಲಿ ಕೆಕಿಯಾಂಗ್, ಈ ವರ್ಷದ ಮಾರ್ಚ್ನಲ್ಲಿ ಲಿ ಕೆಕಿಯಾಂಗ್ ಕಾರ್ಯಭಾರದಿಂದ ಕೆಳಗಿಳಿದಿದ್ದರು.
2013 ರಿಂದ 23ರವೆರೆಗೆ ಚೀನಾದ ನಂ.2ನೇ ನಾಯಕರಾಗಿದ್ದರು. ಜೊತೆಗೆ ಖಾಸಗಿ ಸಂಸ್ಥೆಗೆ ವಕೀಲನಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಚೀನಾದ ಮಾಜಿ ಪ್ರೀಮಿಯರ್ ಲಿ ಕೆಕಿಯಾಂಗ್ ಅವರು ಇಂಗ್ಲಿಷ್ ಮಾತನಾಡುವ ಅರ್ಥಶಾಸ್ತ್ರಜ್ಞರಾಗಿದ್ದರು.ಹೆನಾನ್ ಪ್ರಾಂತ್ಯದ ಗವರ್ನರ್ ಆಗಿದ್ದ ಅವಧಿಯಲ್ಲಿ ಸಾರ್ವಜನಿಕ ವಲಯದ ಉದ್ಯಮಗಳಲ್ಲಿನ ಅವರ ಸುಧಾರಣೆಗಳು ಅವರಿಗೆ ಇನ್ನಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿತು. ಪಕ್ಷದ ನಾಯಕನ ಮಗನಾಗಿ ಹುಟ್ಟಿದರೂ, ಅ ಪ್ರಭಾವವನ್ನು ಬಳಸಿಕೊಂಡು ಪಕ್ಷದಲ್ಲಿ ಮುಂದುವರಿಯಲು ಕೆಕಿಯಾಂಗ್ ಸಿದ್ಧರಿರಲಿಲ್ಲ.
ಕಾನೂನು ಪದವಿ ಹಾಗೂ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿರುವ ಲಿ ಕೆಕಿಯಾಂಗ್ ಅವರು ಮಾವೋ ಝೆಡಾಂಗ್ ಚಿಂತನೆಯ ಅಧ್ಯಯನದಲ್ಲಿ ಪೀಕಿಂಗ್ ವಿಶ್ವವಿದ್ಯಾಲಯದಲ್ಲಿ ಉತ್ತಮ ಸಾಧನೆ ಮಾಡಿದ್ದರು.




