Featured StoryNational

ಬಿಹಾರದ ಛಪ್ರಾದಲ್ಲಿ ಮರವಣಿಗೆ ಸಂದರ್ಭದಲ್ಲಿ ಘರ್ಷಣೆ: ಅಂತರ್ಜಾಲ ಸೇವೆ ಸ್ಥಗಿತ

ಪಾಟ್ನ: ಬಿಹಾರದ ಛಪ್ರಾದಲ್ಲಿ ಧಾರ್ಮಿಕ ವಿಚಾರಕ್ಕೆ ಘರ್ಷಣೆ ಉಂಟಾಗಿದ್ದು, ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಧಾರ್ಮಿಕ ಮೆರವಣಿಗೆ ನಡೆಯುತ್ತಿದ್ದ ವೇಳೆ ಈ ಘರ್ಷಣೆ ಸಂಭವಿಸಿದ್ದು, ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಗೃಹ ಇಲಾಖೆ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಪೋಲೀಸರ ಪ್ರಕಾರ, ಸರನ್ ಜಿಲ್ಲೆಯ ಪ್ರಧಾನ ಕಛೇರಿಯಾಗಿರುವ ಛಪ್ರಾದ ಭಗವಾನ್ ಬಜಾರ್ ಪ್ರದೇಶದಲ್ಲಿ ದುರ್ಗಾದೇವಿಯ ವಿಗ್ರಹಗಳನ್ನು ನೀರಿನಲ್ಲಿ ವಿಸರ್ಜನೆ ಮಾಡುವುದಕ್ಕೂ ಮುನ್ನ ಕೈಗೊಳ್ಳಲಾದ ಮೆರವಣಿಗೆಯ ವೇಳೆ ಈ ಘರ್ಷಣೆ ಉಂಟಾಗಿದೆ.

ಮೆರವಣೆಗೆ ವೇಳೆ ದೊಡ್ಡ ಧ್ವನಿಯಲ್ಲಿ ಡಿಜೆಯನ್ನು ಹಾಕಲಾಗಿತ್ತು. ಕೆಲವು ಕಿಡಿಗೇಡಿಗಳು ಈ ವೇಳೆ ಕಲ್ಲು ತೂರಾಟ ನಡೆಸಿದ್ದರು. ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮುಂದಿನ ಕ್ರಮಕ್ಕಾಗಿ ವಿಡಿಯೋ ತುಣುಕಿನ ಸಹಾಯದಿಂದ ಕಿಡಿಗೇಡಿಗಳನ್ನು ಗುರುತಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button