Featured StoryKodagu

ಕೊಡಗು | ಕಾಫಿತೋಟದಲ್ಲಿ ಹುಲಿ ಪ್ರತ್ಯಕ್ಷ

ಪೊನ್ನಂಪೇಟೆ ತಾಲೂಕಿನ ರುದ್ರಬೀಡು ಗ್ರಾಮದ ಹೊನ್ನಿಕೊಪ್ಪಲಿ ಗ್ರಾಮದ ಪ್ರಶಾಂತ್ ಎಂಬುವರ ತೋಟದಲ್ಲಿ ಹುಲಿ ಪ್ರತ್ಯಕ್ಷವಾಗಿದೆ.

ಕಾಫಿತೋಟದಲ್ಲಿ ಕಾಡುಹಂದಿಯ ಕಳೇಬರ ಪತ್ತೆಯಾಗಿದ್ದು ಕಳೆದ ಎರಡ್ಮೂರು ದಿನಗಳ ಹಿಂದೆ ಕಾಡುಹಂದಿಯನ್ನು ಬಲಿ ಪಡೆದಿತ್ತು ಎನ್ನಲಾಗಿದೆ.

ಕಾಡುಹಂದಿಯನ್ನು ಅರ್ಧಂಬರ್ಧ ತಿಂದು ಕಳೇಬರ ಅಲ್ಲಿ ಬಿಟ್ಟು ಹೋಗಿದೆ. ಹಂದಿಯ ಕಳೇಬರ ಪತ್ತೆಯಾದ ಸ್ಥಳದಲ್ಲಿ ಹುಲಿ ಪ್ರತ್ಯಕ್ಷವಾಗಿದೆ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಕಾಫಿತೋಟದಲ್ಲಿ ಪ್ರತ್ಯಕ್ಷವಾಗಿದ್ದು ಇದೀಗ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button