
Featured StorySports
ಮುಹಮ್ಮದ್ ದ್ವಯರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ – ಭಾರತಕ್ಕೆ 302 ರನ್ ಬೃಹತ್ ಗೆಲುವು
ಶ್ರೀಲಂಕಾ ಎದುರಿನ ಪಂದ್ಯಾವಳಿಯಲ್ಲಿ ಭಾರತ ಅತ್ಯುತ್ತಮ ಬ್ಯಾಟಿಂಗ್ ನಡೆಸಿ 358 ರ ಗುರಿ ನಿಗದಿ ಪಡಿಸಿತ್ತು. ಆದರೆ ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ದಾಳಿಗೆ ಈಡಾಗಿ 55 ರನ್ನಿಗೆ ಅಲೌಟಾಯಿತು.
ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ನಡೆಸಿ 5 ವಿಜೆಟ್ ಪಡೆದರೆ, ಅವರಿಗೆ ಸಾಥ್ ನೀಡಿದ ಸಿರಾಜ್ 3 ವಿಕೆಟ್ ಪಡೆದರು. ಬುಮ್ರಾ ಕೂಡ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದರು.
ಈ ಮುಂಚೆ ಬ್ಯಾಟ್ ಮಾಡಿದ ಭಾರತ ರೋಹಿತ್ ಶರ್ಮಾ ಆರಂಭದಲ್ಲಿ ಬೇಗನೆ ಔಟಾದರೂ ಕೊಹ್ಲಿ 88 ಮತ್ತು ಶುಬ್ ಮನ್ ಗಿಲ್ 92 ರನ್ ಬಾರಿಸಿ ಅತ್ಯುತ್ತಮ ಜೊತೆಯಾಟ ನಡೆಸಿ ಬಲಿಷ್ಟ ಅಡಿಪಾಯ ಹಾಕಿ ಕೊಟ್ಟರು. ನಂತರ ಶ್ರೇಯಸ್ ಅಯ್ಯರ್ ಸ್ಪೋಟಕ ಬ್ಯಾಟಿಂಗ್ ಮಾಡಿ 56 ಎಸೆತದಲ್ಲಿ 82 ರನ್ ಬಾರಿಸಿದರು.
ಶ್ರೀಲಂಕಾ ಪರ ಯಾವುದೇ ಬ್ಯಾಟ್ಸ್ಮನ್’ ಭಾರತದ ಬೌಲಿಂಗ್ ಮುಂದೆ ನಿಲ್ಲದೆ ಅತ್ಯಂತ ಕಡಿಮೆ ಮೊತ್ತಕ್ಕೆ ಔಟಾಗಿ ಶರಣಾದರು.




