Udupi

ಚಿನ್ನವಿದ್ದ ಹ್ಯಾಂಡ್ ಬ್ಯಾಗ್ ಒಪ್ಪಿಸಿ ಮಾನವೀಯತೆ ಮೆರೆದ ಹರೀಶ್ ಎರ್ಮಾಳು

ಕಳೆದೆರೆಡು ದಿನಗಳ ಹಿಂದೆ ಮಹಿಳೆಯೋರ್ವರು ತಮ್ಮ ದ್ವಿಚಕ್ರ ವಾಹನದಲ್ಲಿ ಉಡುಪಿಯಿ೦ದ ಆದಿ ಉಡುಪಿ ಕಡೆಗೆ ಸಂಚರಿಸುವಾಗ ದಾರಿ ಮಧ್ಯೆ ಹ್ಯಾಂಡ್ ಬ್ಯಾಗ್ ಕಳೆದುಕೊಂಡಿದ್ದರು. ಬ್ಯಾಗ್ ನಲ್ಲಿ ಬೆಲೆಬಾಳುವ 70ಗ್ರಾಂ ಚಿನ್ನಾಭರಣ ಮತ್ತು ದಾಖಲೆ ಪತ್ರವಿದ್ದು, ಕಳೆದುಕೊಂಡ ಮಹಿಳೆಯು ಚಿಂತೆಗೀಡಾಗಿದ್ದರು. ಈ ಮಾಹಿತಿಯನ್ನು ಪಡೆದ ಜೀವರಕ್ಷಕ ಈಶ್ವರ್ ಮಲ್ಪೆ ಯವರು ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಸಂದೇಶವನ್ನು ಬಿತ್ತರಿಸಿದ್ದರು.

Screenshot 2023 11 02 22 41 58 03 6012fa4d4ddec268fc5c7112cbb265e7 Udupi

ಅದೇ ದಿನ 7 ಗಂಟೆಗೆ ಎರ್ಮಾಳು ನಿವಾಸಿ ಹರೀಶ್ ಎಂಬವರು ಉಡುಪಿಯ ಗರಡಿಮಜಲು ವಿನಲ್ಲಿರುವ* *ಭಧ್ರ ಮಹಾಕಾಳಿ ದರ್ಶನಕ್ಕೆ ತೆರಳುತ್ತಿರುವಾಗ ದಾರಿ ಮಧ್ಯೆ ಈ ಬ್ಯಾಗು ದೊರೆತಿದ್ದು, ಆಸುಪಾಸಿನಲ್ಲಿ ವಿಚಾರಿಸಿದಾಗ* *ಅದರ ವಾರಿಸುದಾರರು ಸಿಕ್ಕಿರಲಿಲ್ಲ. ಆ ಬ್ಯಾಗನ್ನು ಅವರು ನೇರವಾಗಿ ಭಧ್ರ ಮಹಾಕಾಳಿ ದೇವಸ್ಥಾನದ ಮುಖ್ಯಸ್ಥ ರಾದ ನಾಗರಾಜ್ ಆಚಾರ್ಯ ರವರ ಕೈಗೆ ಒಪ್ಪಿಸಿದ್ದರು. ವಾಟ್ಸಾಪ್ ಮೂಲಕ ಹರಿದಾಡುತ್ತಿದ್ದ ಆಪತ್ಭಾಂಧವ ಈಶ್ವರ್ ಮಲ್ಪೆಯವರ ಸಂದೇಶವನ್ನು ಗಮನಿಸಿದ ನಾಗರಾಜ ಆಚಾರ್ಯರು ಹರೀಶ್ ಮತ್ತು ಚಿನ್ನಾಭರಣ ಕಳೆದುಕೊಂಡಿದ್ದ ಅಶ್ವಿನಿ ಯವರನ್ನು ಕರೆಸಿ ಸತ್ಯಾಸತ್ಯತೆಯನ್ನು ಮನವರಿಕೆ ಮಾಡಿ,ಕೂಲಂಕುಷವಾಗಿ ಪರಿಶೀಲಿಸಿದ ನಂತರ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ದೇವಸ್ಥಾನದ ಸಮೀತಿ ಯವರು , ಹಾಗೂ ಉಡುಪಿ ನಗರ ಠಾಣೆಯ ಠಾಣಾಧಿಕಾರಿ ಮಂಜಪ್ಪ ಡಿ. ಆರ್ ಸಮಕ್ಷಮದಲ್ಲಿ ಕಳೆದುಕೊಂಡಿದ್ದ ಸುಮಾರು 4.5 ಲಕ್ಷ ಮೌಲ್ಯದ ಚಿನ್ನಾಭರಣ ವನ್ನು. ಅಶ್ವಿನಿ ಯವರಿಗೆ ಹಸ್ತಾಂತರಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button