
Udupi
ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ವಿದ್ಯುತ್ ಆಘಾತದಿಂದ ಮೃತ್ಯು – ಅಲ್ಯುಮಿನಿಯಂ ಪೈಪ್’ಗೆ ಕತ್ತಿ ಕಟ್ಟಿ ಕೆಲಸ ಮಾಡುತ್ತಿದ್ದಾಗ ಅವಘಡ
ಶಿರ್ವ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾನೆ.
ಮೃತ ಕಾರ್ಮಿಕನನ್ನು ಪವನ್ ಶ್ರವಣ್ ಸೇವಂತ್ (20) ಎಂದು ಗುರುತಿಸಲಾಗಿದೆ.
ಕುರ್ಕಾಲು ಗ್ರಾಮದ ಸುರೇಶ್ ರವರಿಗೆ ಸಂಬಂಧಿಸಿದ ತೋಟದಲ್ಲಿ ದಿನಾಂಕ: 06.11.2023 ರಂದು ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಕೆಲಸ ಮಾಡುತ್ತಿರುವಾಗ ಅಡಿಗೆ ಕೊಯ್ಯುವರೇ ಅಲ್ಯುಮಿನಿಯಂ ಪೈಪ್‌ಗೆ ಕತ್ತಿಯನ್ನು ಕಟ್ಟಿ ಅಡಿಕೆಯನ್ನು ಕೀಳುವಾಗ ಪಕ್ಕದಲ್ಲಿ ವಿದ್ಯುತ್ ವಯರ್ ತಗುಲಿ ಮೃತಪಟ್ಟಿದ್ದಾನೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 91/23 ಕಲಂ 304A ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.




