Dakshina KannadaFeatured Story

ಸುಳ್ಯ: ನಡು ರಸ್ತೆಯಲ್ಲೇ ಆನೆ ಪ್ರತ್ಯಕ್ಷ; ಕೂದಲೆಳೆಯ ಅಂತರದಲ್ಲಿ ಪಾರಾದ ಬೈಕ್ ಸವಾರರು

ಸುಳ್ಯ: ಇಲ್ಲಿನ ಪಂಜಿಕಲ್ಲು ಬಳಿ ಪ್ರಮುಖ ರಸ್ತೆಯಲ್ಲಿ ಹಾಡ ಹಗಲೇ ಆನೆ ಕಾಣಿಸಿಕೊಂಡಿದ್ದು, ವಾಹನ ಸವಾರರಲ್ಲಿ ಆತಂಕ ಎದುರಾಗಿದೆ.

ಮಧ್ಯಾಹ್ನದ ವೇಳೆ ಆನೆ ನಡು ರಸ್ತೆಯಲ್ಲಿ ಘೀಳಿಡುತ್ತಾ ನಡೆಯತೊಡಗಿದ್ದು, ಎದುರಿನಿಂದ ಬಂದ ಬೈಕ್ ಒಂದು ಆನೆಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ.
ಈ ವೇಳೆ ಇತರ ವಾಹನ ಸವಾರರು ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಕಳೆದ ಎರಡು ವರ್ಷಗಳಿಂದ ತಾಲೂಕಿನಲ್ಲಿ ಆನೆ ದಾಳಿಗೆ ಸುಮಾರು ಐದು ಮಂದಿ ಮೃತಪಟ್ಟಿದ್ದು, ಇದೀಗ ನಡು ರಸ್ತೆಯಲ್ಲೇ ಆನೆ ಕಂಡು ಬಂದಿರುವುದು ಸಾರ್ವಜನಿಕರ ಆತಂಕವನ್ನು ಹೆಚ್ಚಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button