
Dakshina KannadaFeatured Story
ಸುಳ್ಯ: ನಡು ರಸ್ತೆಯಲ್ಲೇ ಆನೆ ಪ್ರತ್ಯಕ್ಷ; ಕೂದಲೆಳೆಯ ಅಂತರದಲ್ಲಿ ಪಾರಾದ ಬೈಕ್ ಸವಾರರು
ಸುಳ್ಯ: ಇಲ್ಲಿನ ಪಂಜಿಕಲ್ಲು ಬಳಿ ಪ್ರಮುಖ ರಸ್ತೆಯಲ್ಲಿ ಹಾಡ ಹಗಲೇ ಆನೆ ಕಾಣಿಸಿಕೊಂಡಿದ್ದು, ವಾಹನ ಸವಾರರಲ್ಲಿ ಆತಂಕ ಎದುರಾಗಿದೆ.
ಮಧ್ಯಾಹ್ನದ ವೇಳೆ ಆನೆ ನಡು ರಸ್ತೆಯಲ್ಲಿ ಘೀಳಿಡುತ್ತಾ ನಡೆಯತೊಡಗಿದ್ದು, ಎದುರಿನಿಂದ ಬಂದ ಬೈಕ್ ಒಂದು ಆನೆಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ.
ಈ ವೇಳೆ ಇತರ ವಾಹನ ಸವಾರರು ಈ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಕಳೆದ ಎರಡು ವರ್ಷಗಳಿಂದ ತಾಲೂಕಿನಲ್ಲಿ ಆನೆ ದಾಳಿಗೆ ಸುಮಾರು ಐದು ಮಂದಿ ಮೃತಪಟ್ಟಿದ್ದು, ಇದೀಗ ನಡು ರಸ್ತೆಯಲ್ಲೇ ಆನೆ ಕಂಡು ಬಂದಿರುವುದು ಸಾರ್ವಜನಿಕರ ಆತಂಕವನ್ನು ಹೆಚ್ಚಿಸಿದೆ.




