
Udupi
ನೇಜಾರು ಕೊಲೆ ಪ್ರಕರಣ | ಶೀಘ್ರವಾಗಿ ಕೊಲೆಗಾರನನ್ನು ಪತ್ತೆ ಹಚ್ಚಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಉಡುಪಿ ಜಾಮಿಯಾ ಮಸೀದಿ ಆಡಳಿತ ಸಮಿತಿ ಆಗ್ರಹ
ಉಡುಪಿ, ನ.12: ಇಂದು ಉಡುಪಿಯ ಹಂಪನಕಟ್ಟೆ ನೇಜಾರಿನ ಮನೆಯಲ್ಲಿ ನಡೆದ ಭೀಕರ ಹತ್ಯಾಕಾಂಡದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು ಇಡೀ ಜಿಲ್ಲೆಯನ್ನೇ ದಿಗ್ಬ್ರಮೆಗೊಳಿಸಿದೆ. ಶೀಘ್ರವಾಗಿ ಕೊಲೆಗಾರನನ್ನು ಪತ್ತೆ ಹಚ್ಚಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಉಡುಪಿ ಜಾಮಿಯಾ ಮಸೀದಿ ಆಡಳಿತ ಸಮಿತಿಯು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸುತ್ತದೆ.
ಘಟನೆಯಿಂದ ಆಘಾತಕ್ಕೊಳಗಾದ ಮೃತರ ಕುಟುಂಬಸ್ಥರ ನೋವಿನಲ್ಲಿ ಉಡುಪಿ ಜಾಮಿಯಾ ಮಸೀದಿಯ ಆಡಳಿತ ಸಮಿತಿಯು ಭಾಗಿಯಾಗಿದ್ದು ಸಂತಾಪ ಸೂಚಿಸುತ್ತದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬಸ್ಥರಿಗೆ ಆದ ನೋವನ್ನು ಭರಿಸುವ ಶಕ್ತಿಯನ್ನು ಅಲ್ಲಾಹನು ನೀಡಲಿ ಎಂದು ಮೃತರಿಗಾಗಿ ಪ್ರಾರ್ಥಿಸುವಂತೆ ಸಮುದಾಯ ಬಾಂಧವರನ್ನು ವಿನಂತಿಸುತ್ತದೆ ಎಂದು ಜಾಮಿಯಾ ಮಸೀದಿಯ ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಝೀಝ್ ತಿಳಿಸಿದ್ದಾರೆ.




