
ನೇಜಾರು ಕೊಲೆ ಪ್ರಕರಣ: ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ
ನೇಜಾರು ಕೊಲೆ ಪ್ರಕರಣದಲ್ಲಿ ನಾಲ್ವರನ್ನು ಒರ್ವ ಆಗಂತುಕ ಕೊಲೆ ಮಾಡಿ ಇಡೀ ರಾಜ್ಯವೇ ಬೆಚ್ಚಿ ಬೀಳುವಂತಾಗಿದೆ. ಉಡುಪಿಯ ಇತಿಹಾಸದಲ್ಲಿ ನಾಲ್ವರನ್ನು ಕೊಲೆ ಮಾಡಿದ ಪ್ರಕರಣ ಇದು ಮೊದಲನೆಯದ್ದಾಗಿದೆ.
ಒಟ್ಟು ಐದು ತಂಡ ರಚಿಸಿ ಆರೋಪಿಗೆ ಪೊಲೀಸರು ಬಲೆ ಬೀಸಿದ್ದಾರೆ. ಇದುವರೆಗೆ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿಲ್ಲ. ಆದರೆ ಶೋಧ ಕಾರ್ಯ ತೀವ್ರಗತಿಯಲ್ಲಿ ಮುಂದುವರಿದಿದೆ. ಕೊಲೆಗೆ ಕಾರಣವೇನೆಂಬುವುದು ಆರೋಪಿಯ ಪತ್ತೆಯ ನಂತರ ಧೃಡ ಪಡಬೇಕಾಗಿದೆ.
ವಾಟ್ಸಪ್ ನಲ್ಲಿ ಕೊಲೆಗೆ ಸಂಬಂಧಿಸಿದಂತೆ ನಾನಾ ರೀತಿಯ ಸುಳ್ಳುವಸುದ್ದಿಗಳು ಹರಿದಾಡುತ್ತಿದ್ದು ಈ ಕೊಲೆಗೆ ಸ್ಪಷ್ಟ ಕಾರಣ ಇನ್ನಷ್ಟೇ ಲಭ್ಯವಾಗಬೇಕಿದೆ.
ಈ ಕೊಲೆಯು ಬೆಳಿಗ್ಗೆ 8.30 ರ ಹೊತ್ತಿಗೆ ನಡೆದಿದ್ದು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಕೊಲೆಯ ಹಲವು ಆಯಾಮಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಪ್ರದೇಶದಲ್ಲಿ ಸಿಸಿಟಿವಿಯ ಅಲಭ್ಯದ ಕಾರಣ ಆರೋಪಿಯ ಗುರುತು ಪತ್ತೆಗೆ ಸ್ವಲ್ಪ ಕಷ್ಟವಾಗಿದೆ. ಆರೋಪಿಯು ಸಂಚರಿಸಿದ ಹಾದಿಯ ಸಿಸಿಟಿವಿಯ ಫುಟೇಜ್ ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಇದೀಗ ಕೊಲೆಯಾದ ನಾಲ್ವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಶವಾಗಾರಕ್ಕೆ ತೆಗೆದುಕೊಂಡು ಹೋಗಲಾಗಿದೆ.



