
Udupi
ನೇಜಾರು ಕೊಲೆ ಪ್ರಕರಣ: ಕೋಡಿಬೆಂಗ್ರೆ ಜಾಮಿಯಾ ಮಸೀದಿ ದಫನ ಭೂಮಿಯಲ್ಲಿ ನೆರವೇರಿದ ಅಂತ್ಯಕ್ರಿಯೆ
ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದ ಅಂತಿಮ ಸಂಸ್ಕಾರ ಇಂದು ಕೋಡಿಬೆಂಗ್ರೆ ಜಾಮೀಯಾ ಮಸೀದಿಯ ದಫನ ಭೂಮಿಯಲ್ಲಿ ನಡೆಯಿತು.
ನೇಜಾರಿನ ಮನೆಯಲ್ಲಿ ಅಂತಿಮ ದರ್ಶನ ಪಡೆದ ನಂತರ ನಾಲ್ಕು ಮೃತದೇಹವನ್ನು ಕೋಡಿಬೆಂಗ್ರೆ ಮಸೀದಿಗೆ ಸಾಗಿಸಿ ಜನಾಝ ನಮಾಝ್ ನಿರ್ವಹಿಸಲಾಯಿತು. ನಮಾಝಿನಲ್ಲಿ ಸಾವಿರಾರು ಜನ ಪಾಲ್ಘೊಂಡಿದ್ದರು.
ನಂತರ ಸಮೀಪದ ದಫನ ಭೂಮಿಯಲ್ಲಿ ನಾಲ್ವರನ್ನು ದಫನ ಮಾಡಲಾಯಿತು. ಈ ಸಂದರ್ಭದಲ್ಲಿ ಪತಿ, ಮಗ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳದಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು. ಉಡುಪಿ ಡಿವೈಎಸ್ಪಿ ದಿನಕರ ಮತ್ತು ಕಾರ್ಕಳದ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಸ್ಥಳದಲ್ಲಿ ಉಪಸ್ಥಿತರಿದ್ದರು.





