Featured StoryCrime

ಕಾಸರಗೋಡು: ಕಾರಿನಡಿ ಬಿದ್ದು ಮಗು ಮೃತ್ಯು: ಸಿಸಿಟಿವಿಯಲ್ಲಿ ಸೆರೆಯಾಯಿತು ಭೀಕರ ದೃಶ್ಯ

ಕಾಸರಗೋಡು: ಮನೆಯ ಕಾರ್‌ ಪಾರ್ಕಿಂಗ್‌ನಲ್ಲಿ ಆಟವಾಡುತ್ತಿದ್ದ‌ ಮಗುವೊಂದು ಕಾರಿನಡಿ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಉಪ್ಪಳದ ಸೋಂಕಾಲ್ ಬಳಿ ಸಂಭವಿಸಿದೆ.
ಒಂದೂವರೆ ವರ್ಷ ಪ್ರಾಯದ ಮಸ್ತುಲ್ ಜಿಶಾನ್ ಕಾರಿನಡಿ ಬಿದ್ದು ಮೃತಪಟ್ಟ ಮಗು.

ಮಗುವಿನ ಸಂಬಂಧಿ ಕಾರು ಮುಂದಕ್ಕೆ ತರುವಾಗ ಮಗು ಕಾರಿನ ಮುಂಭಾಗದ ಟಯರಿನಡಿ ಬಿದ್ದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಗು ಆಗಲೇ ಮೃತಪಟ್ಟಿತ್ತು‌ ಎಂದು ತಿಳಿದು ಬಂದಿದೆ.

ಸೋಂಕಾಲ್ ನಿವಾಸಿ ನಿಝಾರ್ ತಸ್ರೀಫಾ ದಂಪತಿಯ ಪುತ್ರ ಘಟನೆಯಲ್ಲಿ ಮೃತಪಟ್ಟವರು.

ಕಾರು ಚಲಾಯಿಸುತ್ತಿದ್ದುದು ಮಗುವಿನ ಸಂಬಂಧಿ ಎನ್ನಲಾಗುತ್ತಿದೆ. ಘಟನೆಯ ಸಿಸಿಟಿವಿ ದೃಶ್ಯಗಳು ಮನಕಲಕುವಂತಿದೆ.

ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button