Featured StoryUdupi

ನೇಜಾರು ಕೊಲೆ ಪ್ರಕರಣ | ಆರೋಪಿ ಪ್ರವೀಣ್ ಚೌಗಲೆ ಮಹಜರು ಸಂದರ್ಭದಲ್ಲಿ ಜನಾಕ್ರೋಶ | ಪೊಲೀಸರಿಂದ ಲಘು ಲಾಠಿ ಚಾರ್ಜ್ – ಸಂಪೂರ್ಣ ಮಾಹಿತಿ ಇಲ್ಲಿದೆ.

ನೇಜಾರಿನಲ್ಲಿ ನಡೆದ ನಾಲ್ಕು ಮಂದಿಯ ಹತ್ಯಾಕಾಂಡ ಉಡುಪಿಯ ಜನರಲ್ಲಿ ಸಹಜವಾಗಿ ಆಕ್ರೋಶ ಉಂಟು ಮಾಡಿದೆ. ಈತನ್ಮಧ್ಯೆ ಆರೋಪಿಯನ್ನು ಸ್ಥಳ ಮಹಜರು ಮಾಡಲು ಪೊಲೀಸರು ಕೃತ್ಯ ನಡೆದ ಸ್ಥಳಕ್ಕೆ ಬರುವ ವಿಚಾರ ತಿಳಿದು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು‌.

ಪೊಲೀಸರು ಸಂಜೆ ಹೊತ್ತಿಗೆ ಆರೋಪಿಯನ್ನು ಭದ್ರತೆಯೊಂದಿಗೆ ಸ್ಥಳ ಮಹಜರಿಗೆ ಬಂದಾಗ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ ಜನ ಆರೋಪಿಯ ವಿರುದ್ಧ ಘೋಷಣೆ ಕೂಗಿ “ಗಲ್ಲು ಶಿಕ್ಷೆ” ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಜನರನ್ನು ತಡೆಯಲಾಗಿತ್ತು.

 

ನಂತರ ಒಮ್ಮೆಲೆ ಪ್ರತಿಭಟನಾಕಾರರು ಆರೋಪಿಯ ವಾಹನದ ಬಳಿ ತೆರಳಲು ನುಗ್ಗಿದ ಸಂದರ್ಭದಲ್ಲಿ ಆರೋಪಿಯನ್ನು ಸುರಕ್ಷಿತವಾಗಿ ಅಲ್ಲಿಂದ ಕರೆದುಕೊಂಡು ‌ಹೋಗಲು ಲಘು ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಿ ಪೊಲೀಸ್ ವ್ಯಾನ್ ನಲ್ಲಿ ಹೊರಟರು.

ಈ ಸಂದರ್ಭದಲ್ಲಿ ಆಕ್ರೋಶಿತ ಸಾರ್ವಜನಿಕರ ಗುಂಪು ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ಬಂದ್ ಮಾಡಿ ಪ್ರತಿಭಟಿಸಿ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು. ನಮ್ಮ ಮೇಲೆ ಯಾಕೆ ಲಾಠಿ ಚಾರ್ಜ್ ಮಾಡಿದ್ದು ಎಂದು ಪ್ರಶ್ನಿಸಿದರು. ಇದೇ ಸಂದರ್ಭದಲ್ಲಿ ಕೆಲವು ಮಾಧ್ಯಮಗಳ ವರದಿಗಳ ಕುರಿತು ಆಕ್ರೋಶ ಹೊರ ಹಾಕಿದರು. ಈ ಸಂದರ್ಭದಲ್ಲಿ ಸಮುದಾಯದ ನಾಯಕರು ಬಂದು ಮನವೊಲಿಸಲು ಯತ್ನಿಸಿದ್ದಾರೆ. ಕೊನೆಗೆ ಪ್ರತಿಭಟನಾಕಾರರು ಸ್ಥಳದಿಂದ ನಿರ್ಗಮಿಸಿದರು.

IMG20231116164718 1700143315271 Featured Story, Udupi Screenshot 2023 11 16 17 16 13 31 99c04817c0de5652397fc8b56c3b3817 1700143315646 Featured Story, Udupiಸ್ಥಳ ಮಹಜರು:

ಆರೋಪಿಯನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಸ್ಥಳದ ಮಹಜರು ನಡೆಸಲಾಯಿತು. ಈ ಸಂದರ್ಭದಲ್ಲಿ ಮನೆಯ ಬಳಿ ಸಂತ್ರಸ್ಥ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಎಸ್ಪಿ ಹೇಳಿಕೆ:

ದಿನಾಂಕ: 16/11/2023 ರಂದು ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 124/2023 ಕಲಂ:307, 302, 449, 324 ಐಪಿಸಿ ಪ್ರಕರಣದಲ್ಲಿ ಸಂಜೆ 4:45 ಗಂಟೆಗೆ ಘಟನೆ ನಡೆದ ಸ್ಥಳದಲ್ಲಿ ಆರೋಪಿ ತೋರಿಸಿಕೊಟ್ಟ ಸ್ಥಳ ಮಹಜರು ಮಾಡಲು ಆರೋಪಿಯನ್ನು ಕರೆದುಕೊಂಡ ಬಂದ ಸಮಯದಲ್ಲಿ, ಮೃತರ ಸಂಬಂಧಿಗಳು ಹಾಗೂ ಸ್ನೇಹಿತರು ಆರೋಪಿಯ ವಿರುದ್ದ ಫೋಷಣೆ ಕೂಗಿ ಮಹಜರು ಮುಗಿಸಿ ವಾಪಾಸು ಹೊರಡುವ ಸಮಯದಲ್ಲಿ ವಾಹನವನ್ನು ತಡೆದು ನಿಲ್ಲಿಸುವ ಪ್ರಯತ್ನ ಮಾಡಿದ್ದು, ಈ ಸಮಯ ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿ ಆರೋಪಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಪ್ರಸ್ತುತ ಪರಿಸ್ಥಿತಿ ಶಾಂತವಾಗಿರುತ್ತದೆ. ಈ ಬಗ್ಗೆ ಆ ಸಮುದಾಯದ ಹಿರಿಯರೊಂದಿಗೆ ಚರ್ಚಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಲಾಯಿತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button