ಸಕಾರಾತ್ಮಕ ಫಲಿತಾಂಶದ ನಿರೀಕ್ಷೆ’ : ಕತಾರ್ ಜೈಲಿನಲ್ಲಿರೋ ಮಾಜಿ ನೌಕಾಪಡೆ ಸಿಬ್ಬಂದಿ ಬಿಡುಗಡೆಗೆ ಭಾರತ ಮನವಿ

ನವದೆಹಲಿ : ಅಘೋಷಿತ ಆರೋಪದ ಮೇಲೆ ಒಂದು ವರ್ಷಕ್ಕೂ ಹೆಚ್ಚು ಕಾಲ ಬಂಧನದಲ್ಲಿದ್ದ ನಂತರ ಕತಾರ್ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಎಂಟು ಮಾಜಿ ಸಿಬ್ಬಂದಿಯ ಕುಟುಂಬಗಳು ಸಲ್ಲಿಸಿದ ಮೇಲ್ಮನವಿಗೆ ಸಕಾರಾತ್ಮಕ ಫಲಿತಾಂಶವನ್ನ ನಿರೀಕ್ಷಿಸುತ್ತಿರುವುದಾಗಿ ಭಾರತ ಗುರುವಾರ ಹೇಳಿದೆ.

ಭಾರತೀಯ ನೌಕಾಪಡೆಯ ಮುಂಚೂಣಿ ಯುದ್ಧನೌಕೆಗಳನ್ನ ಮುನ್ನಡೆಸಿದ ಅಲಂಕೃತ ಅಧಿಕಾರಿಗಳು ಸೇರಿದಂತೆ ಎಂಟು ಜನರಿಗೆ ಕತಾರ್’ನ ಕೋರ್ಟ್ ಆಫ್ ಫಸ್ಟ್ ಇನ್ ಸ್ಟನ್ಸ್ ಅಕ್ಟೋಬರ್ 26ರಂದು ಮರಣದಂಡನೆ ವಿಧಿಸಿತ್ತು. ಪುರುಷರ ವಿರುದ್ಧದ ಆರೋಪಗಳ ಬಗ್ಗೆ ಎರಡೂ ದೇಶಗಳು ಸಾರ್ವಜನಿಕವಾಗಿ ಮಾತನಾಡಿಲ್ಲ. ಆದ್ರೆ, ವರದಿಗಳು ಅವರ ಮೇಲೆ ಗೂಢಚರ್ಯೆ ಆರೋಪ ಹೊರಿಸಲಾಗಿದೆ ಎಂದು ಸೂಚಿಸಿವೆ.

Latest Indian news

Popular Stories