Crime

ಅಕ್ಟೋಬರ್ 1 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ.ಸೆ.30:- ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ಆಳಂದ ಕಾಲೋನಿ ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಂಡಿರುವ ಹಿನ್ನೆಲೆಯಲ್ಲಿ 2020ರ ಅಕ್ಟೋಬರ್ 1 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.

ಆಳಂದ ಕಾಲೋನಿ ಫೀಡರ್: ಜಫರಾಬಾದ್, ಚೋರ ಗುಮ್ಮಜ್, ಲಕ್ಷ್ಮೀ ನಗರ, ಫೀಲ್ಟರ್ ಬೆಡ್, ಅಹ್ಮದ್ ನಗರ, ಪಿ.ಎಫ್.ಕಚೇರಿ, ಚಿಂಚೋಳಿ ಲೇಔಟ್, ಅಯೋಧ್ಯ ನಗರ, ರಾನೇಶ ಪೀರ್ ದರ್ಗಾ, ಪಲ್ಲಾಪುರ ಆಶ್ರಯ ಕಾಲೋನಿ, ಅಂಬೇಡ್ಕರ್ ಆಶ್ರಯ ಕಾಲೊನಿ, ಶಿವಾ ದಾಲ್‍ಮಿಲ್, ಪಾರ್ಲೆ ಗೋದಾಮ್, ವಿಶ್ವರಾಧ್ಯ ಪೆಟ್ರೋಲ್ ಪಂಪ್, ದುಬೈ ಕಾಲೋನಿ, ಆಳಂದ ಕಾಲೋನಿ, ನಬಿ ಕಾಲೋನಿ, ಶಿವ ನಗರ, ಖಾದ್ರ್ರಿಚೌಕ್, ಎಂ.ಜಿ.ಜಿ.ಟಿ. ಆಶ್ರಯ ಕಾಲೋನಿ, ಸಲಗರ ಸಿ.ಟಿ., ಸುರ್ವಣ ನಗರ, ಅಗ್ರಿಕಲ್ಚರ್ ಯೂನಿವರ್ಸಿಟಿ , ಮಹಾದೇವ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button