
ವಿಶ್ವಕಪ್ 2023 | ಈ ಬಾರಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿ ಭಾರತ
ವಿಶ್ವಕಪ್’ನಲ್ಲಿ ಈ ಬಾರಿ ಪ್ರಚಂಡ ಫಾರ್ಮ್ ನಲ್ಲಿರುವ ಭಾರತ ತಂಡ ಕಪ್ ಗೆಲ್ಲುವ ಫೇವರಿಟ್ ತಂಡವಾಗಿದೆ. ಸೆಮಿಫೈನಲ್ ಸೇರಿ ಒಟ್ಟು ಹತ್ತು ಪಂದ್ಯವನ್ನು ಗೆದ್ದಿರುವ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋಲದೆ ಅಜೇಯವಾಗಿ ತನ್ನ ವಿಜಯ ಯಾತ್ರೆ ಮುಂದುವರಿಸಿದೆ.
ಅಹಮದಾಬಾದ್ ಸ್ಟೇಡಿಯಂ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿರುವ ಟೀಮ್ ಇಂಡಿಯಾ ಸದ್ಯಕ್ಕೆ ಬಲಿಷ್ಠ ಬ್ಯಾಟಿಂಗ್ ಪಡೆ ಮತ್ತು ಮಾರಕ ಬೌಲಿಂಗ್ ದಾಳಿ ನಡೆಸಬಲ್ಲ ಬೌಲರ್ ಗಳನ್ನು ಹೊಂದಿದ್ದಾರೆ. ರೋಹಿತ್ ಶರ್ಮಾ ಎದುರಾಳಿಗಳ ಪಾಲಿಗೆ ಸಿಂಹ ಸ್ವಪ್ನವಾದರೆ ಪ್ರಚಂಡ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ, ಶುಭ್ ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ಕೆ.ಎಲ್ ರಾಹುಲ್ ಭಾರತದ ಸ್ಕೋರನ್ನು ದೊಡ್ಡ ಮೊತ್ತದಲ್ಲಿ ಬದಲಾಯಿಸಬಲ್ಲ ಶಕ್ತಿಯುಳ್ಳವರಾಗಿದ್ದಾರೆ.
ಇನ್ನು ಬೌಲಿಂಗ್ ಮುಹಮ್ಮದ್ ಶಮಿ, ಬುಮ್ರಾ, ಜಡೇಜಾ, ಸಿರಾಜ್ ಅತ್ಯುತ್ತಮ ಫಾರ್ಮ್ ನಲ್ಲಿದ್ದು ಆಸ್ಟ್ರೇಲಿಯಾ ದಾಂಡಿಗರು ಇವರ ಬೌಲಿಂಗ್ ದಾಳಿಯೆದುರು ಮಂಡಿಯೂರುವ ಸಾಧ್ಯತೆ ಹೆಚ್ಚಿದೆ.
ಇನ್ನು ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿದ್ದರೂ ಭಾರತದ ಫಾರ್ಮ್ ಮುಂದೆ ಸಪ್ಪೆಯಾಗಿ ಕಾಣುತ್ತಿದೆ. ಆದರೆ ಡೆವೀಡ್ ವಾರ್ನರ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್ ವೆಲ್ ಸಿಡಿದರೆ ಫಲಿತಾಂಶ ವ್ಯತಿರಿಕ್ತವಾಗುವ ಸಾಧ್ಯತೆ ಇದೆ. ಆದರೆ ಭಾರತದ ಮಾರಕ ಬೌಲಿಂಗ್ ಪಡೆಯನ್ನು ಎದುರಿಸಿ ದೊಡ್ಡ ಮೊತ್ತ ಗಳಿಸುವುದು ಅಥವಾ ಬೆನ್ನಟ್ಟುವುದು ಸಲಭ ಸಾಧ್ಯ ಖಂಡಿತವಲ್ಲ ಎಂಬುದನ್ನು ಈ ಮುಂಚಿನ ಪಂದ್ಯದಲ್ಲಿ ಭಾರತ ನಿರೂಪಿಸಿದೆ.
ಈ ಬಾರಿ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲಿ ಎಂಬುವುದು ಎಲ್ಲರ ಹಾರೈಕೆ…ALL THE BEST TEAM INDIA




