
ಭಾರತದಲ್ಲಿನ ಅಫ್ಘಾನಿಸ್ತಾನದ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಮುಚ್ಚಿದ ಅಫ್ಘಾನಿಸ್ತಾನ
ನವದೆಹಲಿ – ಭಾರತ ಸರ್ಕಾರದ ನಿರಂತರ ಸವಾಲುಗಳನ್ನು ಉಲ್ಲೇಖಿಸಿ ನವದೆಹಲಿಯಲ್ಲಿರುವ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಮುಚ್ಚಿರುವ ಕುರಿತು ಅಫ್ಘಾನಿಸ್ತಾನ ಘೋಷಿಸಿದೆ.
ಈ ನಿರ್ಧಾರವು ನವೆಂಬರ್ 23 ರಿಂದ ಜಾರಿಗೆ ಬರಲಿದೆ. ಎಂಟು ವಾರಗಳ ವಿರಾಮದ ಹೊರತಾಗಿಯೂ, ರಾಜತಾಂತ್ರಿಕರಿಗೆ ವೀಸಾ ವಿಸ್ತರಣೆ ಮತ್ತು ಭಾರತ ಸರ್ಕಾರದ ನಿಲುವಿನಲ್ಲಿ ಬದಲಾವಣೆ ಸೇರಿದಂತೆ ರಾಯಭಾರ ಕಚೇರಿಯ ಉದ್ದೇಶಗಳು ಸಾಕಾರಗೊಳ್ಳಲಿಲ್ಲ ಆ ಹಿನ್ನಲೆಯಲ್ಲಿ ನಿರ್ಧಾರ ಕೈಗೊಂಡಿರುವ ಕುರಿತು ಪ್ರಕಟಣೆ ತಿಳಿಸಿದೆ.
2001 ರಿಂದ ಹಿಂದಿನ ಅಫ್ಘಾನ್ ಗಣರಾಜ್ಯದ ದೀರ್ಘಾವಧಿಯ ಕಾರ್ಯತಂತ್ರದ ಪಾಲುದಾರ ಭಾರತವು ಈ ಪ್ರದೇಶದ ಭೌಗೋಳಿಕ ರಾಜಕೀಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ರಾಯಭಾರ ಕಚೇರಿಯು ನೈಜ ರಾಜಕೀಯದಲ್ಲಿ ಅಂತರ್ಗತವಾಗಿರುವ ಸಂಕೀರ್ಣತೆಗಳನ್ನು ಮತ್ತು ವಿಶೇಷವಾಗಿ ಸವಾಲಿನ ಸಮಯದಲ್ಲಿ ಅಗತ್ಯವಿರುವ ಸೂಕ್ಷ್ಮ ಸಮತೋಲನ ಪ್ರಕ್ರಿಯೆಯನ್ನು ಅಂಗೀಕರಿಸುತ್ತದೆ.
ಅಫ್ಘಾನಿಸ್ತಾನ ಎದುರಿಸುತ್ತಿರುವ ಸವಾಲಿನ ಪರಿಸ್ಥಿತಿಯ ಹಿನ್ನಲೆಯಲ್ಲಿ ಸಾಮಾಜಿಕ-ಆರ್ಥಿಕ ಸುಧಾರಣೆಗಾಗಿ ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ಈ ಕೆಳಗಿನ ವಿನಂತಿಗಳನ್ನು ಪರಿಗಣಿಸಲು ಭಾರತ ಸರ್ಕಾರಕ್ಕೆ ಮನವಿ ಮಾಡಿದೆ.
1. ಮಾನವೀಯ ನೆರವು: ಅಫ್ಘಾನಿಸ್ತಾನದಲ್ಲಿ ಬಡತನ ಮತ್ತು ಸಾಮಾಜಿಕ-ಆರ್ಥಿಕ ಸವಾಲುಗಳಿಂದ ಪೀಡಿತ ಲಕ್ಷಾಂತರ ಜನರ ದುಃಖವನ್ನು ನಿವಾರಿಸಲು ತುರ್ತು ನೆರವು.
2. ರಾಜತಾಂತ್ರಿಕ ಸಂವಾದ: ಕಳವಳಗಳನ್ನು ಪರಿಹರಿಸಲು ಮತ್ತು ಎರಡು ರಾಷ್ಟ್ರಗಳ ನಡುವಿನ ಭವಿಷ್ಯದ ಸಹಯೋಗಕ್ಕೆ ದಾರಿ ಮಾಡಿಕೊಡಲು ರಾಜತಾಂತ್ರಿಕ ಮಾತುಕತೆಗಳ ಪ್ರಾರಂಭ.
3. ಅಂತರರಾಷ್ಟ್ರೀಯ ಬೆಂಬಲ: ಅಫ್ಘಾನಿಸ್ತಾನವನ್ನು ಸ್ಥಿರಗೊಳಿಸಲು ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಅಂತರರಾಷ್ಟ್ರೀಯ ಸಹಾಯಕ್ಕಾಗಿ ಪ್ರೋತ್ಸಾಹ.
Press Statement
FOR IMMEDIATE RELEASE
Date: 30th September, 2023
Afghanistan is closing its Embassy in New Delhi.
The Embassy of the Islamic Republic of Afghanistan in New Delhi regrets to announce the decision to cease its operations, effective October 1, 2023. pic.twitter.com/y1Nb43P9vS— Farid Mamundzay – فرید ماموندزی (@FMamundzay) September 30, 2023




