Udupi

ಪ್ರತಿಭಟನೆ ನಡೆಸಿದ ಲಾರಿ ಚಾಲಕರಿಗೆ ನೋಟಿಸ್ | ಶಾಸಕ ಸುನೀಲ್ ಕುಮಾರ್ ಮತ್ತು ಎಸ್ಪಿ ಡಾ. ಅರುಣ್ ಕೆ ನಡುವೆ ವಾಗ್ವಾದ

ಉಡುಪಿ: ಲಾರಿ ಮುಷ್ಕರ ನಡೆಸಿದವರಿಗೆ ನೋಟೀಸ್ ನೀಡಿದ ಕುರಿತು ಕೆಂಡಾಮಂಡಲವಾದ ಕಾರ್ಕಳ ಶಾಸಕ ಸುನೀಲ್ ಕುಮಾರ್, ಪ್ರತಿಭಟನೆ ಮಾಡಿದವರಿಗೆ ಯಾಕೆ ನೋಟಿಸ್ ಕೊಟಿದ್ದು ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಯುತ್ತರ ನೀಡಿದ ಎಸ್ಪಿ ಅರುಣ್ ಕುಮಾರ್ ಕಾನೂನಾತ್ಮಕವಾಗಿಯೇ ನೋಟಿಸ್ ನೀಡಿದ್ದೇವೆ. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಪ್ರತಿಭಟನೆ ನಡೆಸಿದರೆ ನಾವು ಕ್ರಮ ಕೈಗೊಳ್ಳಬೇಕಾಗುತ್ತದೆ. ನಮಗೂ ಉತ್ತರ ನೀಡ ಬೇಕಾಗಿದೆ ಎಂದರು.

ಈ ನಡುವೆ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆಗೆ ಉಡುಪಿಯಲ್ಲಿ ಸ್ಥಳ ಮೀಸಲಿಟ್ಟಿದ್ದೇವೆ. ಇದು ಪ್ರಜಾಪ್ರಭುತ್ವ. ನಿಮ್ಮ ಆಡಳಿತದಲ್ಲಿ ಹೀಗೆಯೇ ಎಂದು ಹೇಳಿ ನಾವು ಒಪ್ಪಿಕೊಳ್ಳುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದಾಗ ಮಧ್ಯೆ ಪ್ರವೇಶಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಭಟನೆ ನಡೆಸುವುದು ಅವರ ಹಕ್ಕು ಎಂದು ಹೇಳಿದರು.

ನಂತರ ವಾಗ್ವಾದ ಹೆಚ್ಚಿದಾಗ ಎಸ್ಪಿ ಅರುಣ್ ಕೆ ಅವರಿಗೆ ಸುಮ್ಮನಿರಲು ಹೇಳಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button