Bidar

ಬೀದರ್ : ಪೋಷಣೆ ಇಲ್ಲದೇ ಸೊರಗುತ್ತಿರುವ ಸಸಿಗಳು

ಅರಣ್ಯ ಇಲಾಖೆಯ ವತಿಯಿಂದ 5 ಲಕ್ಷಕ್ಕೂ ಅಧಿಕ ಸಸಿಗಳನ್ನು ಬೀದರ್ ಜಿಲ್ಲೆಯಾದ್ಯಂತ ನೆಡಲಾಗಿದ್ದು, ಸೂಕ್ತ ಪಾಲನೆ ಪೋಷಣೆ ಇಲ್ಲದೇ ಸೊರಗುತ್ತಿವೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ತವರು ಜಿಲ್ಲೆ ಬೀದರ್‌ನಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮದ ಮೂಲಕ 5 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಮೂ ಚಾಲನೆ ನೀಡಲಾಗಿತ್ತು. ಆದ್ರೆ ಜಿಲ್ಲೆಯಲ್ಲಿ ನೆಡಲಾದಂತಹ 5 ಲಕ್ಷ ಸಸಿಗಳ ಪೈಕಿ ಅರ್ಧದಷ್ಟು ಸಸಿಗಳು ನೀರು ಮತ್ತು ಅವುಗಳ ಪೋಷಣೆ ಇಲ್ಲದೆ ಬೆಳವಣಿಗೆಯಲ್ಲಿ ಕುಂಠಿತಗೊಂಡಿವೆ.

ಜಿಲ್ಲೆಯಲ್ಲಿ ಐದು ಲಕ್ಷ ಸಸಿಗಳನ್ನು ನೆಡುವಾಗ ಸಚಿವರಿಗೆ ಇದ್ದ ಉತ್ಸಾಹ ಇವಾಗ ಯಾಕೆ ಕಡಿಮೆಯಾಯಿತು, ಹಾಗಾದ್ರೆ ಇದು ನಾಮ್ಕೆ ವಾಸ್ತೆ ಪರಿಸರ ಸಂರಕ್ಷನೆ ನಾ.? 5 ಲಕ್ಷ ಸಸಿ ಗಳನ್ನು ನೆಡುವ ಬದಲು ಎರಡು ಲಕ್ಷ ಗಿಡಗಳನ್ನು ನೆಟ್ಟು ಸಂಪೂರ್ಣವಾಗಿ ಪೋಷಣೆ ಮಾಡಿದರೆ ಒಳ್ಳೆಯದಾಗುತ್ತಿತ್ತು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಓಂಪ್ರಕಾಶ ರೊಟ್ಟೆ…

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button