Crime

ವಕೀಲನ ಹತ್ಯಾ ಪ್ರಕರಣ: 3 ನಿಮಿಷ, 30ಕ್ಕೂ ಹೆಚ್ಚು ಬಾರಿ ಅಟ್ಯಾಕ್‌, ದಂಪತಿ ಬಂಧನ​

ಈರಣ್ಣಗೌಡ ಹತ್ಯೆಗೆ ಸಂಬಂಧಿಸಿದಂತೆ ಆರು ಮಂದಿ ವಿರುದ್ಧ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಮೊನ್ನೆ ಅವ್ವಣ್ಣ, ಭಾಗೇಶ್, ಮಲ್ಲಿನಾಥ್‌ ಸೇರಿದಂತೆ ಮೂವರನ್ನ ಬಂಧಿಸಿದ್ದ ಪೊಲೀಸರು, ಇದೀಗ ಈ ಹತ್ಯೆಗೆ ರೂಪುರೇಷೆ ಸಿದ್ದಪಡಿಸಿದ್ದ ಮಾಸ್ಟರ್ ಮೈಂಡ್ ನೀಲಕಂಠರಾವ್ ಪಾಟೀಲ್ ಮತ್ತು ಆತನ ಪತ್ನಿ ಸಿದ್ದಮ್ಮ ಪಾಟೀಲ್‌ರನ್ನ ಪೊಲೀಸರು ತಡರಾತ್ರಿ ಅರೆಸ್ಟ್ ಮಾಡಿದಾರೆ.

ಕಳೆದ ನಾಲ್ಕು ದಿನ ಮುಂಚಿತವಾಗಿ ಈರಣ್ಣಗೌಡನ್ನ ಹತ್ಯೆ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದ ನೀಲಕಂಠರಾವ್ ಪತ್ನಿ ಸಿದ್ದಮ್ಮಳು ಮಲ್ಲಿನಾಥ್‌‌ಗೆ 50 ಸಾವಿರ ರೂಪಾಯಿ ಹಣ ನೀಡುವುದಾಗಿ ಹೇಳಿದ್ದಳು. ಅಲ್ಲದೇ ಹತ್ಯೆಯಾದ ದಿನ ಅಂದರೆ ಡಿಸೆಂಬರ್ 7 ರಂದು ತಾವು ಖರೀದಿಸಿದ್ದ ಹೊಸ ಕಾರಿನ ಪೂಜೆ ಮಾಡಲು ನೀಲಕಂಠರಾವ್ ಪಾಟೀಲ್‌ ದಂಪತಿ ದೇವಲಗಾಣಗಾಪುರದ ದತ್ತನ ಸನ್ನಿಧಿಗೆ ತೆರಳಿದ್ದರು. ದತ್ತನ ಸನ್ನಿಧಿಯಲ್ಲಿ ಪೂಜೆ ಮುಗಿಸಿದ್ದ ತಕ್ಷಣ ಇತ್ತ ಮಲ್ಲಿನಾಥ್‌ನು ನೀಲಕಂಠರಾವ್‌ಗೆ ಕಾಲ್ ಮಾಡಿ ಈರಣ್ಣಗೌಡನನ್ನ ಮುಗಿಸಿರೋದಾಗಿ ಮಾಹಿತಿ ನೀಡಿದ್ದಾರೆ.

ಈರಣ್ಣಗೌಡ ಹತ್ಯೆ ಸುದ್ದಿ ಕಿವಿಗೆ ಬಂದು ಅಪ್ಪಳಿಸುತ್ತಲೇ ಸಂತಸಪಟ್ಟ ನೀಲಕಂಠರಾವ್ ದಂಪತಿ, ಬಳಿಕ ಕಲಬುರಗಿಗೆ ಆಗಮಿಸಿದ್ದಾರೆ. ನಂತರ ನೀಲಕಂಠರಾವ್ ಮನೆಗೆ ರಕ್ತದ ಕಲೆಯಲ್ಲೇ ಬಂದ ಹಂತಕ ಮಲ್ಲಿನಾಥ್ ನಾಯ್ಕೋಡಿ, ಈರಣ್ಣಗೌಡ ಹತ್ಯೆಗೆ ಪ್ರತಿಯಾಗಿ 50 ಸಾವಿರ ರೂಪಾಯಿ ಪಡೆದುಕೊಂಡು ಹೋಗಿದ್ದಾನೆ‌. ಹೀಗಾಗಿ ವಕೀಲನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿವಿ ಠಾಣೆ ಪೊಲೀಸರು ನೀಲಕಂಠರಾವ್ ಮತ್ತು ಸಿದ್ದಮ್ಮಳನ್ನ ಬಂಧಿಸಿದ್ದಾರೆ.

ಅದೆನೇ ಇರಲಿ ಈಗಾಗಲೇ ಐವರು ನರಹಂತಕರನ್ನ ಬಂಧಿಸಿರುವ ಖಾಕಿಪಡೆ ಪ್ರಕರಣದ ಹೆಚ್ಚಿನ ವಿಚಾರಣೆ ನಡೆಸುತ್ತಿದೆ. ಆಸ್ತಿ ಮೇಲಿನ ಆಸೆಗೆ ವಕೀಲನ ಭೀಕರ ಹತ್ಯೆಗೈಯ್ದ ನರಹಂತಕರಿಗೆ ಕಠಿಣ ಶಿಕ್ಷೆಯಾಗಲಿ ಅನ್ನೊದೆ ಕುಟುಂಬಸ್ಥರ ಆಶಯವಾಗಿದೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button