
ಸಿದ್ದರಾಮಯ್ಯ ಮುಸಲ್ಮಾನರಿಗೆ ತೃಪ್ತಿ ಪಡಿಸಲು ಯಾವ ಮಟ್ಟಕ್ಕಾದರೂ ಹೋಗುತ್ತಾರೆ : ಕೆ. ಎಸ್ ಈಶ್ವರಪ್ಪ
ಹುಬ್ಬಳ್ಳಿ :ಮುಸಲ್ಮಾನರಿಗೆ ತೃಪ್ತಿ ಪಡಿಸಲು ಯಾವ ಮಟ್ಟಕ್ಕಾದರೂ ಸಿಎಂ ಸಿದ್ದರಾಮಯ್ಯ ಹೋಗುತ್ತಾರೆ ಎಂದು ಕೆ. ಎಸ್ ಈಶ್ವರಪ್ಪ ಗರಂ ಆಗಿದ್ದಾರೆ.
ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ ಮುಂದಿನ ದಿನಗಳಲ್ಲಿ ಹೈಕಮಾಂಡ್ ನಾಯಕರು ಅವರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲಿದ್ದಾರೆ.ಇಡೀ ಕರ್ನಾಟಕದಲ್ಲಿ ಬಿಜೆಪಿ ಶಕ್ತಿಶಾಲಿಯಾಗಿದೆ. ಆದರೆ ಹೈಕಮಾಂಡ್‌ಗೆ ರಾಜ್ಯ ಬಿಜೆಪಿ ಮೇಲೆ ಬೇಸರ ಇದೆ. ಇದು ನಿಜ. ರಾಜ್ಯ ಬಿಜೆಪಿ ಸ್ಥಿತಿಗತಿ ಬಗ್ಗೆ ರಾಷ್ಟ್ರೀಯ ಮುಖಂಡರು ಬಹಳ ಬೇಸರಗೊಂಡಿದ್ದಾರೆ. ಆದರೆ, ಅವರ ನಿಯಂತ್ರಣ ಇಲ್ಲ ಎನ್ನುವುದು ಸುಳ್ಳು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಮಹಾನ್ ಸುಳ್ಳುಗಾರ, ಜಾತಿ, ಧರ್ಮ ಒಡೆಯುವುದರಲ್ಲಿ ನಿಸ್ಸಿಮ. ಈ ಹಿಂದೆ ಲಿಂಗಾಯತರಲ್ಲಿ ಒಡಕು ಉಂಟು ಮಾಡಿದ್ದರು. ಈಗ ಈಡಿಗ ಸಮಾಜ ಒಡೆಯಲು ಮುಂದಾಗಿದ್ದಾರೆ.ಬಿಜೆಪಿಯಲ್ಲಿ ನಾವು ಯಾರು ಹೆದರೋದಿಲ್ಲ. ಅವರು ದೆಹಲಿಯಲ್ಲಿದ್ದಾರೆ ನಾವು ಬೆಂಗಳೂರಿನಲ್ಲಿದ್ದೇವೆ ಅಷ್ಟೇ. ಭಯೋತ್ಪಾದಕ ಜತೆ ಸಿಎಂ ವೇದಿಕೆ ಹಂಚಿಕೊಂಡಿದ್ದಾರೆ ಎನ್ನುವುದು ಶಾಸಕ ಯತ್ನಾಳ ಅವರ ಹೇಳಿಕೆ ವೈಯಕ್ತಿಕವಾದದು. ಅದನ್ನು ದೃಢಪಡಿಸುವುದಾಗಿ ಅವರು ತಿಳಿಸಿದ್ದು, ಪ್ರೂವ್ ಮಾಡಲಿ ನೋಡೊಣ ಎಂದರು.




