
Bengaluru UrbanFeatured Story
ಲೋಕಸಭಾ ಚುನಾವಣೆಗೆ ‘ಡಾ.ಯತೀಂದ್ರ’ ಸ್ಪರ್ಧಿಸುವುದಿಲ್ಲ – ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ
ಬೆಂಗಳೂರು: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಡಾ.ಯತೀಂದ್ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇದಲ್ಲಾ ಊಹಾಪೋಹವಾಗಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.
ಇಂದು ಸಂಸದ ಪ್ರತಾಪ್ ಸಿಂಹ ಪಾಸ್ ಪಡೆದು ಲೋಕಸಭೆಗೆ ನುಗ್ಗಿದ ಪ್ರಕರಣ ಕುರಿತಂತೆ ಲೇಹರ್ ಸಿಂಗ್ ಆರೋಪಗಳಿಗೆ ಪ್ರತ್ಯುತ್ತರ ನೀಡಿದಂತ ಅವರು, ಬಿಜೆಪಿ ಸಂಸದ ಲೇಹರ್ ಸಿಂಗ್ ವಿರುದ್ಧ ಕಿಡಿಕಿಡಿಯಾದರು.
ಬಿಜೆಪಿಯವರಿಗೆ ಸ್ವಲ್ಪ ಬುದ್ಧಿ ಕಡಿಮೆ ಅನ್ನಿಸುತ್ತಿದೆ. ಅದಕ್ಕೆ ಹೀಗೆಲ್ಲ ಮಾತನಾಡ್ತಿದ್ದಾರೆ. ನಾವು ಯಾರನ್ನೂ ಟ್ರ್ಯಾಪ್ ಮಾಡಿಲ್ಲ. ಇದೆಲ್ಲ ಬಿಜೆಪಿ ಕಪೋಲ ಕಲ್ಪಿತ ಆರೋಪಗಳಷ್ಟೇ ಎಂದರು.ಲೋಕಸಭಾ ಚುನಾವಣೆಗೆ ಕೊಡಗು-ಮೈಸೂರು ಕ್ಷೇತ್ರದಿಂದ ಡಾ.ಯತೀಂದ್ರ ಸ್ಪರ್ಧಿಸೋದಿಲ್ಲ ಎಂದಿದ್ದಾರೆ.




