Udupi

ಮಣಿಪಾಲ: ಕಳೆದು ಹೋದ 18 ಮೊಬೈಲ್ ಫೋನ್ ಗಳ ಪತ್ತೆ

2023ನೇ ಜನವರಿ ಮಾಹೆಯಿಂದ ಈ ವರೆಗೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ದೂರುದಾರರು ಕಳೆದುಕೊಂಡಿರುವ ಮೊಬೈಲ್‌ ಫೋನ್‌ಗಳನ್ನು ಹಾಗೂ ಠಾಣಾ ಅಪರಾಧ ಕ್ರಮಾಂಕ 310/2023 ಕಲಂ: 380 ಐಪಿಸಿ ಪ್ರಕರಣದಲ್ಲಿ ಒಳಗೊಂಡಿರುವ ಮೊಬೈಲ್‌ ಪೋನ್‌ಗಳನ್ನು Central Equipment Identity Register (CEIR Portal) ಮೂಲಕ ಪತ್ತೆ ಹಚ್ಚಿ, ಒಟ್ಟು ಸುಮಾರು 3 .5 ಲಕ್ಷ ಮೌಲ್ಯದ 18 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ದಿನಾಂಕ: 16.12.2023 ರಂದು ದಿಯಾಂಜಲಿ, ಈಶ್ವರ ನಗರ ಎಂಬುವವರು ಠಾಣೆಗೆ ಹಾಜರಾಗಿ ದಿನಾಂಕ 05.11.2023 ರಂದು ರಾತ್ರಿ ಮನೆಯಲ್ಲಿ ಅವರ One Plus 7 ಮೊಬೈಲ್ ಪೋನ್ ನ್ನು ಹಾಗೂ ಅವರ ಸ್ನೇಹಿತಯ Redmi Note 10 Pro max ಮೊಬೈಲ್‌ ಫೋನ್‌ನ್ನು ಸಹ ದಿನಾಂಕ 27.11.2023 ರಂದು ರಾತ್ರಿ ಅವರು ವಾಸವಿರುವ ಈಶ್ವರ ನಗರದ ಮನೆಯಲ್ಲಿ ಕಳವಾಗಿರುತ್ತದೆ. ಕಳವಾದ One Plus 7 ಮೊಬೈಲ್‌ ಪೋನಿನ ಅಂದಾಜು ಮೌಲ್ಯ 15,000/- ಆಗಬಹುದು. ಹಾಗೂ Redmi Note 10 Pro max ಮೊಬೈಲ್‌ ಫೋನಿನ ಅಂಧಾಜು ಮೌಲ್ಯ ರೂ. 20,000/- ಅಗಬಹುದು ಎಂಬುದಾಗಿ ನೀಡಿದ ದೂರನ್ನು ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 310/2023 ಕಲಂ; 380 ಐಪಿಸಿ ರೀತ್ಯಾ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.

ಕಳವಾದ ಮೊಬೈಲ್‌ ಫೋನ್‌ಗಳನ್ನು CEIR PORTAL ನಲ್ಲಿ ನಮೂದಿಸಿದ್ದು, ಸದರಿ ಮೊಬೈಲ್‌ಗಳು CEIR PORTAL ನಲ್ಲಿ ಅಪರಿಚಿತ ವ್ಯಕ್ತಿ ಉಪಯೋಗಿಸುತ್ತಿರುವ ಬಗ್ಗೆ ಕಂಡು ಬಂದಿದ್ದು ಸದರಿ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದು , ಸದ್ರಿ ವ್ಯಕ್ತಿಯು ದೀಕ್ಷಿತ್‌(27) ತಂದೆ:ಯಾದವ, ಆರೂರು ಗ್ರಾಮ ಎಂಬಾತನಾಗಿದ್ದು, ಆತನಿಂದ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಬೇರೆ ಬೇರೆ ಕಡೆಗಳಲ್ಲಿ ಕಳವು ಮಾಡಿದ 6 ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆದು, ಆತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಸದರಿ ಮೊಬೈಲ್‌ಗಳನ್ನು ಪತ್ತೆ ಹಚ್ಚುವಲ್ಲಿ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ದೇವರಾಜ ಟಿ.ವಿ ರವರ ನೇತೃತ್ವದಲ್ಲಿ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್‌ ಉಪ ನಿರೀಕ್ಷಕರಾದ ರಾಘವೇಂದ್ರ ಸಿ, ಅಕ್ಷಯ ಕುಮಾರಿ ಎಸ್‌ ಎನ್‌, ಸಿಬ್ಬಂದಿಗಳಾದ ಎ.ಎಸ್‌.ಐ ವಿವೇಕಾನಂದ ಬಿ, ಅಬ್ದುಲ್‌ ರಜಾಕ್‌, ಚೆನ್ನೇಶ್‌, ಮಂಜುನಾಥ ಎಂ.ಆರ್‌, ಸುರೇಶ್ ಪಾಟೀಲ್‌, ಶ್ರೀಮತಿ ಶುಭಾ ರವರ ತಂಡವು ಕಾರ್ಯನಿರ್ವಹಿಸಿರುತ್ತದೆ.

ಠಾಣಾ ಪ್ರಕರಣದಲ್ಲಿ ಒಳಗೊಂಡ ಮೊಬೈಲ್‌ ಸೇರಿದಂತೆ CEIR PORTAL ಮೂಲಕ ಸುಮಾರು 3.5 ಲಕ್ಷ ಮೌಲ್ಯದ 18 ಮೊಬೈಲ್‌ ಫೋನ್‌ಗಳನ್ನು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಸಿದ್ಧಲಿಂಗಪ್ಪ ಟಿ ರವರು ಮಣಿಪಾಲ ಠಾಣೆಯಲ್ಲಿ ವಾರೀಸುದಾರರಿಗೆ ಹಸ್ತಾಂತರಿಸಿದರು.

ಸಾರ್ವಜನಿಕರು ಕಳೆದುಕೊಂಡ ಮೊಬೈಲ್‌ ಫೋನ್‌ನನ್ನು Central Equipment Identity Register (CEIR Portal) ನಲ್ಲಿ ನಮೂದಿಸಿದ್ದಲ್ಲಿ ಪೊಲೀಸರು ಪತ್ತೆ ಮಾಡಲು ಅನುಕೂಲವಾಗುತ್ತದೆ ಹಾಗೂ ಸಾರ್ವಜನಿಕರು ಕಳೆದುಕೊಂಡ ಮೋಬೈಲ್‌ ಫೋನ್‌ಗಳ ದುರ್ಬಳಕೆಯನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಆದುದರಿಂದ ಸಾರ್ವಜನಿಕರು ಮೊಬೈಲ್‌ ಕಳೆದುಕೊಂಡಲ್ಲಿ CEIR Portal ನಲ್ಲಿ ನಮೂದಿಸುವಂತೆ ಪೊಲೀಸ್‌ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button