ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಭಾಷಣ ಮಾಡಲು ಅಷ್ಟೆ ಬರುತ್ತದೆ ಆಡಳಿತ ನಡೆಸಲು ಬರುವುದಿಲ್ಲ: ಗಣಿಹಾರ ವಾಗ್ದಾಳಿ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮೀತ್ ಶಾ ಅವರಿಗೆ ಭಾಷಣ ಮಾಡಲು ಅಷ್ಟೆ ಬರುತ್ತದೆ ಆಡಳಿತ ನಡೆಸಲು ಬರುವುದಿಲ್ಲ ದೇಶದ ರಕ್ಷಣೆ ಅವರಿಂದ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಂಸತ್ ನಲ್ಲಿ ನಡೆದ ಘಟನೆಯ ಬಗ್ಗೆ ಇದು ವರೆಗೂ ಪ್ರಧಾನಿ ನರೇಂದ್ರ ಮೋದಿ ಅವರಾಗಲಿ ಅಥವಾ ಗೃಹ ಸಚಿವರಾಗಿ ಮಾತನಾಡಿಲ್ಲಾ. ಇನ್ನು ಇದರ ಬಗ್ಗೆ ಪ್ರಧಾನಿಗಳು ಹಾಗೂ ಗೃಹ ಸಚಿವರು ಮಾತನಾಡಬೇಕು ಎಂದು ಒತ್ತಾಯಿಸುತ್ತಿರುವ ಸಂಸದರನ್ನೇ ಅಮಾನತ್ತುಗೊಳಿಸಲಾಗಿದೆ. ಇದು ಹಿಟ್ಲರ್ ಆಡಳಿತವನ್ನು ಮೀರಿಸುತ್ತಿದೆ ಎಂದರು.

ಇನ್ನು ಬಿಜೆಪಿ 16 ವರ್ಷ ಆಡಳಿತ ನಡೆಸಿದೆ ಇವರ ಆಡಳಿತಾವಧಿ ಗಮಿಸಿದಾಗ ಬಹುತೇಕ ಪ್ರಕರಣಗಳು ಇವರ ಕಾಲದಲ್ಲಿಯೇ ನಡೆದಿವೆ. ಕಾಂದಾರ ದಾಳಿ, ಅಕ್ಷರದಾಮ, ಸಂಸತ್ ದಾಳಿ, ರಘುನಾತ, ಅಮರನಾಥ, ಗೋದ್ರಾಕಾಂಡ, ಪುಲ್ವಾಮಾ, ಉರಿ ದಾಳಿಗಳನ್ನು ಗಮನಿಸಿದಾಗ ಇವೆಲ್ಲ ಘಟನೆಗಳು ಚುನಾವಣೆ ಸಮೀಪಿಸಿದಾಗಲೆ ನಡೆದಿರುವ ದಾಳಿಗಳಿವು. ಈ ರೀತಿಯ ದಾಳಿಗಳನ್ನು ಬಿಜೆಪಿ ತನ್ನ ಚುನಾವಣಾ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದರು.
ಪುಲ್ವಾಮಾ ದಾಳಿ ನಡೆದು 5 ವರ್ಷ ಕಳೆಯುತ್ತಾ ಬಂದಿದೆ. ಇದುವರೆಗೆ ಆ ದಾಳಿ ನಡೆಸಿದವರು ಯಾರು. ಈ ಪ್ರಕರಣದಲ್ಲಿ ಯಾರನ್ನು ಬಂಧೀಸಲಾಗಿದೆ. ಯಾರಿಗೆ ಎನು ಶಿಕ್ಷೆ ನೀಡಲಾಗಿದೆ ಎಂಬುದರ ಕುರಿತು ಮಾಹಿತಿಯೇ ಇಲ್ಲಾ. ಈ ಮಾಹಿತಿಯನ್ನು ಸರ್ಕಾರ ಇದುವರೆಗೂ ಬಿಡುಗಡೆ ಮಾಡಿಲ್ಲಾ. ಇದು ಇವರ ವಿಫಲತೆಯನ್ನು ತೋರಿಸುತ್ತದೆ ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.

ಇನ್ನು ಮೊನ್ನೆ ನಡೆದ ಘಟನೆಯ ಸಂದರ್ಭದಲ್ಲಿ ಸಂಸತ್ ನಲ್ಲಿ ಪ್ರಧಾನಿ ಹಾಗೂ ಗೃ ಸಚಿವರು ಇರಲ್ಲಿಲ್ಲ ಅವರು ಏಕೆ ಇರಲಿಲ್ಲ. ಅವರಿಲ್ಲದ ಸಮಯದಲ್ಲೇ ಈ ಘಟನೆ ಏಕೆ ನಡೆಯಿತು ಎಂಬುದನ್ನು ನೋಡಬೇಕಿದೆ. ಇನ್ನು ಈ ಘಟನೆಯಲ್ಲಿರು ಆರೋಪಿಗಳು ನಮ್ಮ ರಾಜ್ಯದ ಸಂಸದರಾದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದು ಸಂಸತ್ ಒಳಗೆ ಬಂದಿದ್ದಾರೆ. ಇದೆಲ್ಲಗೊತ್ತಿದ್ದರು ಅವರನ್ನು ಯಾರು ಪ್ರಶ್ನಿಸುತ್ತಿಲ್ಲ. ಈ ಘಟನೆ ಕುರಿತು ಸರ್ಕಾರದಲ್ಲಿ ಯಾರು ಕೂಡ ಜವಾಬ್ದಾರಿಯಿಂದ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.
2014ರ ಪೂರ್ವದಲ್ಲಿ ದೇಶದ ಭದ್ರತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದೆ ಮಾತನಾಡಿದ್ದು, ಈಗ ಮಾತನಾಡುತ್ತಿಲ್ಲ 56 ಇಂಚಿನ ಎದೆ ಎಲ್ಲ ಹೋಯಿತು, ಚಾಣಕ್ಯ ಗೃಹ ಸಚಿವರ ಚಾಣಾಕ್ಷತನ ಎಲ್ಲ ಹೋಗಿದೆ ಎಂದು ಖಾರವಾಗಿ ಪ್ರಶ್ನಿಸಿದರು.

ಸುಮಾರು ಐದು ರಾಜ್ಯದಿಂದ ಆರೋಪಿಗಳು ಬಂದಿದ್ದರು, ಐದು ರಾಜ್ಯದವರಿಗೆ ಸಂಸದ ಪ್ರತಾಪ್ ಸಿಂಹ ಅವರೇ ಹೇಗ ಪಾಸ್ ನೀಡಿದರು? ಈ ಪಾಸ್ ನೀಡಿದ ಸಂಸದ ಕಾಂಗ್ರೆಸ್ ಅಥವಾ ಬೇರೆ ಪಕ್ಷದ ಸಂಸದರಿದ್ದರೆ ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮಾಜದ ಸಂಸದ ಇದ್ದರೆ ಇಂದು ಸ್ಥಿತಿ ಬೇರೆ ಇರುತ್ತಿತ್ತು ಎಂದರು.

ಇನ್ನು ಮುಸ್ಲಿಂರ ಮೇಲೆ ದಾಳಿ ಮಾಡುವ ಎನ್.ಐ.ಎ ಎಲ್ಲದೆ. ಮುಸ್ಲಿಂರು, ಹಿಂದುಳಿದವರ ಮೇಲೆ ದಾಳಿ ಮಾಡಲಷ್ಟೆ ಎನ್.ಐ.ಎ ಇದೆಯೇ? ಇಷ್ಟೆಲ್ಲ ಅವರು ಮಾಡಿದರೆ ದುಷ್ಕರ್ಮಿಗಳು ಆದರು ಅವರು ಉಗ್ರವಾದಿಗಳು ಆಗಲಿಲ್ಲಾ. ಮುಸ್ಲಿಂರಿದ್ದರೆ ಮಾತ್ರ ಉಗ್ರವಾದಿಗಳಾ? ಅವರು ಕೂಡ ಉಗ್ರವಾದಿಗಳೇ ಎಂದರು.

ಇನ್ನು ಇವರು ಯಾರು? ಯಾವ ಸಂಘಟನೆಯೊಂದಿಗೆ ನಂಟಿದೆ? ಇವರ ಹಿನ್ನಲೆ ಏನು? ಇದರ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ ಎಂದರು.

Latest Indian news

Popular Stories