Crime

ಶತಕ ಸಮೀಪಿಸಿದ ಪೆಟ್ರೋಲ್ !

ನವದೆಹಲಿ,ಫೆ. 16:- ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ ಲೀಟರ್ ಗೆ 26-30 ಪೈಸೆ ಹೆಚ್ಚಳವಾಗಿದೆ ಪರಿಣಾಮ , ನಿತ್ಯವೂ ನಾಗರಿಕರ ಜೇಬು ಸುಡುತ್ತಿದೆ.ಜೊತೆಗೆ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತಿದೆ.
ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರ ಗಳು ಸತತ ಎಂಟನೇ ದಿನವೂ ಏರಿಕೆ ಕಂಡಿದೆ. ಕಳೆದ ಎಂಟು ದಿನಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 2.36 ರೂ., ಡೀಸೆಲ್ ದರ ಲೀಟರ್ ಗೆ 2.91 ರೂ ಹೆಚ್ಚಳವಾಗಿದೆ.
ಒಎಂಸಿಗಳು ಬೆಲೆಗಳ ಅನುಸಾರ ವಾಹನ ಇಂಧನ ದರಗಳು ಏರುತ್ತಲೇ ಇರುವುದರಿಂದ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 89 ರೂಪಾಯಿ ದಾಟಿದೆ. ಮತ್ತೆ ಕೆಲವು ನಗರಗಳಲ್ಲಿ ನೂರರಗಡಿ ತಲುಪಿದ್ದು, ನಿತ್ಯವೂ ನಾಗರಿಕ ಜೇಬು ಸುಡುತ್ತಿದೆ.ಪರಿಣಾಮ ಬಳಕೆಯ ವಸ್ತುಗಳು ಗಗನ ಮುಟ್ಟುತ್ತಿವೆ, ಜನಸಾಮಾನ್ಯರ ಹಾಹಾಕಾರವೂ ಹೆಚ್ಚಾಗುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button