Bidar

ಶಾಲಾ ಪಠ್ಯದಲ್ಲಿ ಚನ್ನಬಸವ ಪಟ್ಟದ್ದೇವರ ಜೀವನ ಚರಿತ್ರೆ ಸೇರಿಸುವಂತೆ ಮನವಿ.

ಬೀದರ್ : ಕಲ್ಯಾಣ ಕರ್ನಾಟಕ ಭಾಗದಲ್ಲಿ‌ ಕನ್ನಡ ಉಳಿಸಲು ಶ್ರಮಿಸಿದ ಲಿಂ. ಡಾಕ್ಟರ್ ಚನ್ನಬಸವ ಪಟ್ಟದೇವರ ಜೀವನ ಚರಿತ್ರೆಯನ್ನ ಶಾಲಾ ಪಠ್ಯಕ್ರಮದಲ್ಲಿ ಅಳವಡಿಸುವಂತೆ ಒತ್ತಾಯಿಸಿ ಬಸವ ಪರ ಸಂಘಟನೆಗಳ ಕಾರ್ಯಕರ್ತರು ಮನವಿ ಸಲ್ಲಿಸಿದರು. ಬಸವಕಲ್ಯಾಣದ ತಹಶೀಲ್ದಾರ್ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಕನ್ನಡ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪೂಜ್ಯ ಚನ್ನಬಸವ ಪಟ್ಟದ್ದೇವರು, ಕನ್ನಡ ಏಳಿಗೆಗಾಗಿ ಸಾಕಷ್ಟ ಶ್ರಮಿಸಿದ್ದಾರೆ. ನಿಜಾಮರ ಕಾಲದಲ್ಲಿ ಕನ್ನೆ ಕಲಿಸುವುದು ಅಪರಾಧ ಎನ್ನುವಂತ ಸಮಯದಲ್ಲಿ ಹೊರಗಡೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡ ಕಲಿಸಿದ್ದಾರೆ. ಕನ್ನಡಕ್ಕೆ ತನ್ನದೇ ಆದ ಸೇವೆಯನ್ನ ಸಲ್ಲಿಸಿರುವ ಶೀಗಳ ಜೀವನ ಎಲ್ಲರಿಗೂ ಆದರ್ಶಮಯ, ಹೀಗಾಗಿ ಶ್ರೀಗಳ ಜೀವನ ಚರಿತ್ರೆಯು ಮುಂದಿನ ಪೀಳಿಗೆಗೆ ತಿಳಿಸುವುದು ಅತ್ಯಂತ ಅವಶ್ಯಕವಾಗಿದೆ. ಹೀಗಾಗಿ ಶ್ರೀಗಳ ಜೀವನ ಕುರಿತು ಶಾಲಾ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಬೇಕೆಂದು‌ ಮನವಿ ಮಾಡಿದರು.

THG ಬೀದರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button