Featured StoryNational

ಹಿಂದೂ ವಿದ್ಯಾರ್ಥಿಗಳು ತರಗತಿಗೆ ಕೇಸರಿ ಶಲ್ಯ ಧರಿಸಿಕೊಂಡು ಬಂದರೆ ನಿಮ್ಮ ತುಘಲಕ್‌ ಸರ್ಕಾರಕ್ಕೆ ನಮ್ಮನ್ನು ತಡೆಯಲು ಸಾಧ್ಯವಿದೆಯಾ? – ಮಾಜಿ ಶಾಸಕ ರಘುಪತಿ ಭಟ್

ನ್ಯಾಯಾಲಯದ ತೀರ್ಪಿನಂತೆ ಶಿಕ್ಷಣ ಇಲಾಖೆ ಅನುಸರಿಸುತ್ತಿರುವ ಪ್ರಸಕ್ತ ಹಿಜಾಬ್‌ ಕುರಿತಾದ ನಿಯಮವನ್ನು ಉಲ್ಲಂಘಿಸಿ ತರಗತಿಯಲ್ಲಿ ಹಿಜಾಬ್‌ ಧರಿಸುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಖಂಡನೀಯ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಹಿಜಾಬ್‌ ಸೂಕ್ಷ್ಮ ವಿಚಾರವಾಗಿದ್ದು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿರುವುದು ಮಹಾಪರಾಧ. ಲೋಕಸಭಾ ಚುನಾವಣಾ ಹೊಸ್ತಿಲಿನಲ್ಲಿ ಕಾಂಗ್ರೆಸ್‌ ಸರ್ಕಾರ ಈ ವಿಚಾರ ಮುನ್ನೆಲೆಗೆ ತಂದಿರುವ ಹಿಂದೆ ರಾಜಕೀಯ ಲೆಕ್ಕಾಚಾರವಿದೆ.

ನಾಡಿನ ಮುಸಲ್ಮಾನ ಸಮುದಾಯ, ಸಂಪ್ರದಾಯವಾದಿಗಳಿಗೆ ಇರದ ಆಸಕ್ತಿ ಈ ಸಮಾಜವಾದಿ ಸಿದ್ದರಾಮಯ್ಯ ಅವರಿಗೇಕೆ?

ಹಿಜಾಬ್‌ ನಿಯಮ ಸಡಿಲಿಕೆಯನ್ನು ಮುಂದಿಟ್ಟುಕೊಂಡು ಹಿಂದೂ ವಿದ್ಯಾರ್ಥಿಗಳು ತರಗತಿಗೆ ಕೇಸರಿ ಶಲ್ಯ ಧರಿಸಿಕೊಂಡು ಬಂದರೆ ನಿಮ್ಮ ತುಘಲಕ್‌ ಸರ್ಕಾರಕ್ಕೆ ನಮ್ಮನ್ನು ತಡೆಯಲು ಸಾಧ್ಯವಿದೆಯಾ? ಎಂದು ಎಚ್ಚರಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button