
Bengaluru UrbanFeatured Story
ಹಿಜಾಬ್ ವಿವಾದ:ಲೀಗಲ್ ತಂಡ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಖ್ಯಮಂತ್ರಿ ನಿರ್ಧಾರ :ಸಚಿವ ಮಧು ಬಂಗಾರಪ್ಪ
ಬೆಂಗಳೂರು: ರಾಜ್ಯ ಸರ್ಕಾರವು ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಂಡಿದ್ದು ಬಿಜೆಪಿ ಇದನ್ನು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.ಜೊತೆಗೆ ಹಿಂದೂ ಸಂಘಟನೆಗಳು ಕೂಡ ಇದನ್ನು ವಿರೋಧಿಸಿವೆ.
ಹಿಜಾಬ್ ನಿಷೇಧ ಹಿಂಪಡೆಯುವ ಬಗ್ಗೆ ಮುಖ್ಯಮಂತ್ರಿ ಲೀಗಲ್ ತಂಡ ಮತ್ತು ಅಧಿಕಾರಿಗಳ ಜೊತೆಗೆ ಚರ್ಚುಸಿ ಸೂಕ್ತವಾದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಚುನಾವಣೆಗೆ ಮೊದಲು ಕೂಡ ತಮ್ಮ ಪಕ್ಷ ಹಿಜಾಬ್ ನಿಷೇಧವನ್ನು ವಿರೋಧಿಸಿತ್ತು ಎಂದು ಸಚಿವರು ಹೇಳಿದರು.ನಿನ್ನೆ ಮೈಸೂರಲ್ಲಿ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ನಿಮ್ಮ ಸಂಪ್ರದಾಯ ಹಾಗೂ ಪದ್ಧತಿಗಳನ್ನು ಆಚರಿಸಲು ಯಾವುದೇ ಅಡ್ಡಿಯಿಲ್ಲ ಅಂತ ಹೇಳಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು. ಬಿಜೆಪಿ ಚುನಾವಣೆ ಹತ್ತಿರ ಬಂದಾಗ ಪರೇಶ್ ಮೇಸ್ತಾ, ಹಿಜಾಬ್ ನಂಥ ವಿಷಯಗಳನ್ನು ಬಿಜೆಪಿ ಮುನ್ನೆಲೆಗೆ ತರುತ್ತದೆ. ಬಿಜೆಪಿಯವರಿಗೆ ಉತ್ತರಿಸುವ ಅವಶ್ಯಕತೆ ತಮಗಿಲ್ಲ “ಎಂದರು.




