ಬೆಂಗಳೂರು :ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಸಾವು, ಮಗು ಸ್ಥಿತಿ ಅಸ್ವಸ್ತ

ಬೆಂಗಳೂರು: ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಮೃತಪಟ್ಟು, 4 ವರ್ಷದ ಮಗು ಸ್ಥಿತಿ ಗಂಭೀರವಾದ ಘಟನೆ ಬೆಂಗಳೂರಿನ ಸದಾಶಿವನಗರದ ಅಶ್ವಥ್ ನಗರದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ರಮ್ಯಾ (24) ಎಂದು ಗುರುತಿಸಲಾಗಿದೆ. ರಮ್ಯಾ ತನ್ನ ಮಗುವಿಗೆ ಸ್ನಾನ ಮಾಡಿಸುವಾಗ ಗ್ಯಾಸ್ ಗೀಸರ್ (ಕಾರ್ಬನ್ ಮೋನಾಕ್ಸೈಡ್) ಸೋರಿಕೆಯಾಗಿದೆ.ಕೂಡಲೇ ಇಬ್ಬರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ತಾಯಿ ರಮ್ಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯ ಮಗು ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Latest Indian news

Popular Stories