
Bidar
ಔರಾದ್ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ | 4 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಾಹನ ವಶ
Anti Narcotics Squad ರಿಂದ ಸುಮಾರು 4 ಕೆ.ಜಿ 20 ಗ್ರಾಂ ಗಾಂಜಾ, 4 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಮತ್ತು ದ್ವೀಚಕ್ರ ವಾಹನ ವಶ
ಬೀದರ್ : ಜಿಲ್ಲೆಯ ಔರಾದ-ಮಮದಾಪೂರ ರಸ್ತೆಯ ಮಾರ್ಗದಲ್ಲಿ ದ್ವೀಚಕ್ರ ವಾಹನದ ಮೇಲೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಗಾಂಜಾ ಸಾಗಾಣಿಕೆ ಕುರಿತು ಖಚಿತ ಮಾಹಿತಿ ಮೇರೆಗೆ
ಔರಾದ್ ಪೊಲೀಸ್ ಠಾಣೆಯ ಪಿ.ಎಸ್.ಐ ಉಪೇಂದ್ರಕುಮಾರ, ಹಾಗೂ ತಹಶಿಲ್ದಾರ ಮಲ್ಲಶೆಟ್ಟಿ ಚಿದ್ರೆ ಅವರ ನೇತತ್ವದಲ್ಲಿ ದಾಳಿ ಮಾಡಿ ಅರೋಪಿತರಿಂದ 4 ಕೆ.ಜಿ 20 ಗ್ರಾಂ ಗಾಂಜಾ, ಒಂದು ದ್ವೀಚಕ್ರ ವಾಹನ ಹೀಗೆ ಒಟ್ಟು 4,40,000=00 ರೂಪಾಯಿ ಮೌಲ್ಯದವುಗಳನ್ನು ವಶ ಪಡಿಸಿಕೊಂಡು ಇಬ್ಬರು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದು .ತನಿಖೆ ಮುಂದುವರೆದಿದೆ
ದಾಳಿಯಲ್ಲಿ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಬಹುಮಾನ ಮತ್ತು ಪ್ರಶ೦ಸನ ಪತ್ರ ನೀಡಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ಲಾಘಿಸಿದ್ದಾರೆ
THG ಬೀದರ್




